ಸುದ್ಧಿಕನ್ನಡ ವಾರ್ತೆ
ಪಣಜಿ: ಬುಧವಾರ ರಾತ್ರಿ ಪಣಜಿ ಸಮೀಪದ ಮೆರ್ಶಿಯ ಫ್ಲೈಓವರ್ ಬಳಿ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮರ್ಷಿ ಮೇಲ್ಸೇತುವೆ ಬಳಿಯ ಅಪಾಯಕಾರಿ ಜಂಕ್ಷನ್‍ನಲ್ಲಿ ಏಕಮುಖ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಗಿಮೆಲ್ ಕುಜೂರ್ (31, ಛತ್ತೀಸಗಡ ಮೂಲ) ಎಂಬ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಹಳೆ ಗೋವಾ ಪೊಲೀಸರು ಅಪಘಾತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.