ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಶಾರಜಾ ದಿಂದ ಕೋಚಿನ್ ಗೆ ಹೊರಟಿದ್ದ ಏರ್ ಅರೇಬಿಯಾ ವಿಮಾನದಲ್ಲಿ 48 ವರ್ಷದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ತುರ್ತಾಗಿ ಗೋವಾದ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಮಾಡಿದ ಘಟನೆ ನಡೆದಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಮಾನವನ್ನು ಕೂಡಲೇ ಈ ವ್ಯಕ್ತಿಯ ಆರೋಗ್ಯ ತಪಾಸಣೆಗಾಗಿ ಉತ್ತರ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಗಿದೆ.
ಕೇರಳದ ಕೊಟ್ಟಾಯಂ ನಲ್ಲಿನ ಜೋಸೆಫ್ ಉಲಾಹನ್ನನ್ ಈ ವ್ಯಕ್ತಿಗೆ ಇತ್ತೀಚೆಗಷ್ಟೇ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವ್ಯಕ್ತಿಗೆ ವಿವಾನದಲ್ಲಿ ಶಾರಿರಿಕ ತೊಂದರೆಯುಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಈ ವಿಮಾನವನ್ನು ಗೋವಾದ ವಿಮಾನ ನಿಲ್ದಾಣಕ್ಕೆ ತಿರುಗಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.
ವೈದ್ಯರು ಈ ವ್ಯಕ್ತಿ ಸಾವನ್ನಪ್ಪಿರುವುದಾಗಿ ಘೋಷಿಸಿದರು. ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಒಪ್ಪಿಸಿದ ನಂತರ ವಿಮಾನ ಗೋವಾದಿಂದ ಮುಂದೆ ಪ್ರಯಾಣ ಬೆಳೆಸಿದೆ.