ಸುದ್ಧಿಕನ್ನಡ ವಾರ್ತೆ

Goa: ಗೋವಾ ರಾಜಧಾನಿ ಪಣಜಿಯ ಮಾಂಡವಿ ಸೇತುವೆಯ ಮೇಲೆ ಭಾನುವಾರ ಬೆಳಿಗ್ಗೆ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. (accident took place between a car and a bike on Panaji’s Mandavi Bridge on Sunday morning). ಈ ಅಪಘಾತದಲ್ಲಿ ಬೈಕ್ ಸವಾರ ಬಾರ್ದೇಸ ತಾಲೂಕಿನ ಮಸೂದ ಸಾವಕಾರ (31) ಗಂಭೀರವಾಗಿ ಗಾಯಗೊಂಡಿದ್ದು, ಬಾಂಬೋಲಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪೋಲಿಸರು ನೀಡಿದ ಮಾಹಿತಿಯ ಅನುಸಾರ ಈ ಅಪಘಾತ ಭಾನುವಾರ ಬೆಳಿಗ್ಗೆ 4.30 ರ ಸುಮಾರು ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರಿಂದ ಬಂದ ಕಾರಿಗೆ ವೇಗವಾಗಿ ಡಿಕ್ಕಿ ಹೊಡೆದ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಣಜಿ ಪೋಲಿಸ್ ನಿರೀಕ್ಷಕ ವಿಜಯ್ ಚೋಡಣಕರ್ ರವರ ಮಾರ್ಗದರ್ಶನದ ಅಡಿಯಲ್ಲಿ ತನಿಖಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ದ್ವಿಚಕ್ರವಾಹನ ಸವಾರ ಬೇತಿಮ್ ನಿಂದ ಪಣಜಿಗೆ ಬರುತ್ತಿದ್ದ ಹಾಗೂ ಕಾರು ಸವಾರ ಪಣಜಿಯಿಂದ ಪರ್ವರಿಗೆ ಬರುತ್ತಿದ್ದ ಎನ್ನಲಾಗಿದೆ.