ಸುದ್ಧಿಕನ್ನಡ ವಾರ್ತೆ
Goa: ಗೋವಾದ ಮಾಪ್ಸಾದ ಕರಸವಾಡಾ ಜಂಕ್ಷನ್ ಪಕ್ಕದಲ್ಲಿದ್ದ 35 ಅನಧೀಕೃತ ಮನೆಗಳನ್ನು ಮಾಪ್ಸಾ ನಗರಪಾಲಿಕೆ ಶುಕ್ರವಾರ ತೆರವು ಕಾರ್ಯಾಚರಣೆ ಕೈಗೊಂಡಿದೆ. ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಜೆಸಿಬಿ ಮೂಲಕ ಮನೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಮಾಪ್ಸಾ ಪಾಲಿಕೆಯ ಮುಖ್ಯಾಧಿಕಾರಿ ಈ ಅನಧೀಕೃತ ಮನೆಗಳ ನಿರ್ಮಾಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಾಪ್ಸಾದಲ್ಲಿರುವ ಅನಧೀಕೃತ 50 ಮನೆಗಳ ತೆರವು ಕಾರ್ಯಾಚರಣೆಗೆ ಪಾಲಿಕೆ ಆದೇಶ ಹೊರಡಿಸಿತ್ತು. (The corporation had issued an order for eviction of 50 unauthorized houses in Mapsa).  ಈ ಪೈಕಿ 14 ಜನರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇವರಲ್ಲಿ ಕೆಲವರ ಮನೆಗಳ ತೆರವಿಗೆ ಕೋರ್ಟ ತಡೆಯಾಜ್ಞೆ ನೀಡಿತ್ತು. ಆದರೆ ಒಬ್ಬ ವ್ಯಕ್ತಿ ತನ್ನ ಮನೆಯನ್ನು ತಾನೇ ಸ್ವತಃ ತೆರವು ಮಾಡಿದ್ದ ಎನ್ನಲಾಗಿದೆ. ಇನ್ನುಳಿದ 35 ಮನೆಗಳ ತೆರವು ಕಾರ್ಯಾಚರಣೆಯನ್ನು ಮಾಪ್ಸಾ ಪಾಲಿಕೆ ಶುಕ್ರವಾರ ಪೂರ್ಣಗೊಳಿಸಿದೆ ಎಂದು ಪಾಲಿಕೆಯ ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

  2004 ರಿಂದ ಗೋವಾದಲ್ಲಿ ಅನಧೀಕೃತ ಮನೆಗಳ ತೆರವು ಕಾರ್ಯಾಚರಣೆ…?
ಗೋವಾ ಸರ್ಕಾರವು 2004 ರಿಂದ ಅನಧೀಕೃತ ಮನೆಗಳ ತೆರವು ಕಾರ್ಯಾಚರಣೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುತ್ತಾ ಬಂದಿದೆ. ಗೋವಾದ ವಾಸ್ಕೊ ಬೈನಾದಲ್ಲಿದ್ದ ಸಾವಿರಾರು ಮನೆಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗಿತ್ತು. ಅಂತೆತೇ ಗೋವಾ ರಾಜ್ಯದಲ್ಲಿರುವ ಅನಧೀಕೃತ ಮನೆಗಳನ್ನು ಹಂತ ಹಂತವಾಗಿ ಗೋವಾ ಸರ್ಕಾರ ಯಾವುದೇ ಶಾಶ್ವತ ಪುನರ್ವತಿ ಕಲ್ಪಿಸಿ ಕೊಡದೆಯೇ ತೆರವು ಕಾರ್ಯಾಚರಣೆ ಕೈಗೊಂಡಿದೆ.