ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದು ಸಮುದ್ರದಲ್ಲಿಯೂ ಉಬ್ಬರವುಂಟಾಗಿದೆ. ( Rain has started again in the state of Goa and the tide has also formed in the sea) ಇದರಿಂದಾಗಿ ಸಮುದ್ರದ ನೀರು ಉಕ್ಕಿ ಬಂದಿದ್ದು ಸಮುದ್ರ ತೀರದಲ್ಲಿ ನಿರ್ಮಿಸಲಾಗಿದ್ದ ಶಾಕ್ಸ(ಬಾರ್ ಮತ್ತು ರೆಸ್ಟೊರೆಂಟ್) ನೀರಲ್ಲಿ ಮುಳುಗಿದ್ದು ಶಾಕ್ಸ ಮಾಲೀಕರು ಹೆಚ್ಚಿನ ನಷ್ಠ ಅನುಭವಿಸುಂತಾಗಿದೆ.
ಅಕ್ಟೋಬರ್ 1 ರಿಂದ ಗೋವಾ ರಾಜ್ಯದಲ್ಲಿ ಪ್ರವಾಸಿ ಸೀಜನ್ ಆರಂಭಗೊಂಡಿದ್ದು, ( The tourist season has started in the state of Goa from October 1). ಗೋವಾ ರಾಜ್ಯ ಸರ್ಕಾರವು ರಾಜ್ಯದ ಬೀಚ್ ಗಳನ್ನು ಶಾಕ್ಸ ಗಳನ್ನು ನಿರ್ಮಿಸಲು ಪ್ರವಾಸಿ ಸೀಜನ್ ಆರಂಭಗೊಳ್ಳುವ ಮುನ್ನವೇ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಇದರಿಂದಾಗಿ ಬೀಚ್ ಗಳಲ್ಲಿ ಶಾಕ್ಸ ಮಾಲೀಕರು ಸಕಾಲದಲ್ಲಿ ಶಾಕ್ಸ ಛತ್ರಗಳನ್ನು ನಿರ್ಮಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಮತ್ತೆ ಮಳೆ ಆರಂಭಗೊಂಡಿದ್ದು, ಸಮುದ್ರದ ನೀರಿನ ಮಟ್ಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬೀಚ್ ನಲ್ಲಿದ್ದ ಶಾಕ್ಸಗಳು ನೀರಲ್ಲಿ ಮುಳುಗಿಹೋಗಿ ಹಾನಿ ಸಂಭವಿಸಿದೆ.
ಹುಣ್ಣಿಮೆಯಿಂದಾಗಿ ಸಮುದ್ರದಲ್ಲಿ ಉಬ್ಬರವುಂಟಾಗಿದೆ. ಅಂತೆಯೇ ಮಳೆಯ ಪ್ರಮಾಣವೂ ಹೆಚ್ಚಿರುವುದರಿಂದ ಸಮುದ್ರದ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗಿ ಈ ಅನಾಹುತ ಸಂಭವಿಸಿದೆ. ಬುಧವಾರ ಮಧ್ಯರಾತ್ರಿಯ ಹೊತ್ತಿಗೆ ಗೋವಾದ ಬಾಣಾವಲಿ, ಮಜೋರ್ದಾ, ಉತೋರ್ದಾ, ಸೇರ್ನಾಭಾಟಿ ಬೀಚ್ ಗಳಲ್ಲಿ ಸಮುದ್ರ ಉಕ್ಕಿ ಬಂದಿದ್ದು ಶಾಕ್ಸಗಳು ಮುಳುಗಿ ಹೋಗಿದೆ. ಕೆಲವೆಡೆ ಶಾಕ್ಸ ಛತ್ರಗಳು ಕುಸಿದು ಬಿದ್ದಿರುವ ಕುರಿತಂತೆಯೂ ವರದಿಯಾಗಿದೆ.
ಒಟ್ಟಾರೆ ಇದ್ದಕ್ಕಿದ್ದಂತೆಯೇ ಮಧ್ಯರಾತ್ರಿ ಉಕ್ಕಿದ ಸಮುದ್ರ ಹೆಚಿನ ಆತಂಕ ಸೃಷ್ಠಿಸಿದೆ.