ಸುದ್ಧಿಕನ್ನಡ ವಾರ್ತೆ
Goa : ಜಾಗತಿಕ ಪ್ರವಾಸಿ ಪ್ರಸಿದ್ಧವಾಗಿರುವ ಉತ್ತರ ಗೋವಾದ ಕಲಂಗುಟ್  (Goa Calngut Beech)ಇದೀಗ ನೈಟ್ ಕ್ಲಬ್ ಡಾನ್ಸ (Night Club) ಸಂಸ್ಕೃತಿಯಿಂದಾಗಿ ಸ್ಥಳೀಯರಿಗೆದೊಡ್ಡ ತಲೆನೋವಾಗಿ ಪರಿಣಮಿಸಿದೆ ಇದರಿಂದಾಗಿ ಇದೇ ಪರಿಸ್ಥಿತಿಯನ್ನು ಮುಂದುರೆಯಲು ನಾವು ಬಿಡುವುದಿಲ್ಲ ಎಂದು ಕಲಂಗುಟ್ ನಿವಾಸಿಗಳು ಎಚ್ಚೆತ್ತುಕೊಂಡಿದ್ದು ಈ ಕುರಿತಂತೆ ಸ್ಥಳೀಯ ಜನತೆ ಪ<ಚಾಯತ ಮತ್ತು ಪೋಲಿಸ್ ಠಾಣೆಯಲ್ಲಿಯೂ ದೂರು ಸಲ್ಲಿಸಿದ್ದಾರೆ.

ಜಗತ್ಪ್ರಸಿದ್ಧ ಕಲಂಗುಟ್ ಬೀಚ್ ಕಳೆದ ಕೆಲ ದಿಗಳಿಂದ ಅಪರಾಧ ಪ್ರಕರಣಗಳಿಂದಾಗಿ ಹೆಸರು ಮಾಡುತ್ತಿರುವುದು ಒಂದು ಶಾಪವಾಗಿ ಪರಿಣಮಿಸಿದೆ. ಈ ಕುರಿತು ಸಾಮಾಜಿಕ ಹೋರಾಟಗಾರ ನಿತೇಶ್ ಚೋಡಣಕರ್ ಪ್ರತಿಕ್ರಿಯೆ ನೀಡಿ- ಒಂದು ಕಾಲದಲ್ಲಿ ಕಲಂಗುಟ್ (Calngut) ಎಂಬ ನಮ್ಮ ಊರು ಗೋವಾದ ವೈಭವ ಎಂದು ಹೇಳಲಾಗುತ್ತಿತ್ತು ಎಂದರು.

ರಾಜಕೀಯ, ಸಾಮಾಜಿಕ, ಅಂತೆಯೇ ಸಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಕಲಂಗುಟ್ ಇದೀಗ ನೈಟ್ ಕ್ಲಬ್ ಮತ್ತು ಡಾನ್ಸ ಬಾರ್ ಗಳಿಗಾಗಿ ಗುರುತಿಸಿಕೊಳ್ಳುವಂತಾಗಿದೆ. ಸ್ಥಳೀಯ ಪಂಚಾಯತಿ , ಶಾಸಕರು, ಮತ್ತು ಪೋಲಿಸರು ಈ ಭಾಗದಲ್ಲಿನ ಅಪರಾಧಗಳನ್ನು ನಿಯಂತ್ರಿಸಿದರೆ ಈ ಊರು ಮತ್ತೆ ಸ್ವಚ್ಛ ಮತ್ತು ಸುಂದರವಾಗಿದೆ ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದ್ದಾರೆ.

ಗೋವಾ ರಾಜ್ಯವು ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗೋವಾದಲ್ಲಿ ಬೀಚ್ ಗಳು ಪ್ರಮುಖ ಪ್ರವಾಸಿ ಆಕರ್ಷಣೆಯಲ್ಲೊಂದಾಗಿದೆ. ಅದರಲ್ಲೂ ಪ್ರಮುಖವಾಗಿ ಗೋವಾಕ್ಕೆ ಬಂದ ಯಾವುದೇ ಪ್ರವಾಸಿಗರು ಕಲಂಗುಟ್ ಬೀಚ್ ಗೆ ಭೇಟಿ ನೀಡದೆಯೇ ವಾಪಸ್ಸಾಗುವುದಿಲ್ಲ. ಕಲಂಗುಟ್ ಬೀಚ್ ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಕಲಂಗುಟ್ ಅಪರಾಥ ಪ್ರಕರಣಗಳಿಗೆ ಮತ್ತು ನೈಟ್ ಕ್ಲಬ್, ಬಾರ್ ಸಂಸ್ಕೃತಿಯಿಂದಾಗಿ ಹೆಸರು ಹಾಳಾಗುತ್ತಿರುವುದು ಖೇದಕರ ಸಂಗತಿಯಾಗಿದೆ.