ಪಣಜಿ: ಗೋವಾ ದೂಧಪಣಜಿ: ಗೋವಾ ದೂಧಸಾಗರ ಜಲಪಾತಕ್ಕೆ ತೆರಳಲು ಟ್ರೆಕ್ಕಿಂಗ್‍ಗೆ ವಿಧಿಸಲಾಗಿರುವ ದರಗಳನ್ನು ರದ್ದುಗೊಳಿಸದ ಹೊರತು ಪ್ರವಾಸಿಗರಿಗೆ ಸೇವೆ ಸಲ್ಲಿಸದಿರಲು ಕುಳೆಯಲ್ಲಿರುವ ಪ್ರವಾಸಿ ಮಾರ್ಗದರ್ಶಕರು ನಿರ್ಧರಿಸಿದ್ದಾರೆ. ಆದ್ದರಿಂದ ಟ್ರೆಕ್ಕಿಂಗ್‍ಗೆ ಬಂದ ಪ್ರವಾಸಿಗರು ಹಿಂತಿರುಗಬೇಕಾಯಿತು. ಪ್ರವಾಸಿ ಮಾರ್ಗದರ್ಶಕರು ಸ್ಥಳೀಯ ಪಂಚಾಯಿತಿ, ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕರ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಟ್ರೆಕ್ಕಿಂಗ್ ಗೆ ತೆರಳುವ ಪ್ರವಾಸಿಗರಿಗೆ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಏಕಾಏಕಿ 177 ರೂ. ಶುಲ್ಕ ವಿಧಿಸುತ್ತಿದೆ. ಅದೇ ರೀತಿ ಅರಣ್ಯ ಇಲಾಖೆ ಕೂಡ 50 ರೂ ಶುಲ್ಕ ವಿಧಿಸುತ್ತಿದೆ, ಇಷ್ಟಾದರೂ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ದೂಧಸಾಗರ ಜಲಪಾತದ ಬಳಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಲಾಗಿಸದೆ.
ಭಾನುವಾರ ಅರಣ್ಯ ಇಲಾಖೆಯ ಗೇಟ್ ಬಳಿ ಕುಳೆ ಪ್ರದೇಶದ ಪ್ರವಾಸಿ ಮಾರ್ಗದರ್ಶಕರು ಸಭೆ ನಡೆಸಿದರು. ಅರಣ್ಯ ಇಲಾಖೆಯು ಹೆಚ್ಚಿಸಿರುವ 50 ರೂ.ಗಳ ಶುಲ್ಕ ಹಾಗೂ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧಿಸಿರುವ 177 ರೂ.ಗಳನ್ನು ರದ್ದುಪಡಿಸುವವರೆಗೆ ಪ್ರವಾಸಿಗರನ್ನು ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಿಲ್ಲ ಎಂದು ಎಲ್ಲಾ ಮಾರ್ಗದರ್ಶಕರು ನಿರ್ಧರಿಸಿದ್ದಾರೆ. ಇದರಿಂದಾಗಿ ಜಗತ್ಪ್ರಸಿದ್ಧ ದೂಧಸಾಗರ ಜಲಪಾತಕ್ಕೆ ಟ್ರೆಕ್ಕಿಂಗ್ ತೆರಳುವುದು ಸದ್ಯಕ್ಕೆ ಸ್ಥಗಿತಗೊಂಡಂತಾಗಿದೆ.
ಮಳೆಗಾಲದಲ್ಲಿ ಬಂದ್ ಆಗಿದ್ದ ದೂಧಸಾಗರ ಜಲಪಾತ ವೀಕನೆ, ಕಳೆದ ವಾರವಷ್ಟೇ ದೂಧಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿತ್ತು. ಇದೀಗ ದೂಧಸಾಗರ ಜಲಪಾತಕ್ಕೆ ಟ್ರೆಕ್ಕಿಂಗ್ ತೆರಳಲು ಮತ್ತೆ ಪ್ರವಾಸಿರಿಗೆ ನಿರಾಸೆ ಎದುರಾಗಿದೆ.
ಸಾಗರ ಜಲಪಾತಕ್ಕೆ ತೆರಳಲು ಟ್ರೆಕ್ಕಿಂಗ್‍ಗೆ ವಿಧಿಸಲಾಗಿರುವ ದರಗಳನ್ನು ರದ್ದುಗೊಳಿಸದ ಹೊರತು ಪ್ರವಾಸಿಗರಿಗೆ ಸೇವೆ ಸಲ್ಲಿಸದಿರಲು ಕುಳೆಯಲ್ಲಿರುವ ಪ್ರವಾಸಿ ಮಾರ್ಗದರ್ಶಕರು ನಿರ್ಧರಿಸಿದ್ದಾರೆ. ಆದ್ದರಿಂದ ಟ್ರೆಕ್ಕಿಂಗ್‍ಗೆ ಬಂದ ಪ್ರವಾಸಿಗರು ಹಿಂತಿರುಗಬೇಕಾಯಿತು. ಪ್ರವಾಸಿ ಮಾರ್ಗದರ್ಶಕರು ಸ್ಥಳೀಯ ಪಂಚಾಯಿತಿ, ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕರ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಟ್ರೆಕ್ಕಿಂಗ್ ಗೆ ತೆರಳುವ ಪ್ರವಾಸಿಗರಿಗೆ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಏಕಾಏಕಿ 177 ರೂ. ಶುಲ್ಕ ವಿಧಿಸುತ್ತಿದೆ. ಅದೇ ರೀತಿ ಅರಣ್ಯ ಇಲಾಖೆ ಕೂಡ 50 ರೂ ಶುಲ್ಕ ವಿಧಿಸುತ್ತಿದೆ, ಇಷ್ಟಾದರೂ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ದೂಧಸಾಗರ ಜಲಪಾತದ ಬಳಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಲಾಗಿಸದೆ.
ಭಾನುವಾರ ಅರಣ್ಯ ಇಲಾಖೆಯ ಗೇಟ್ ಬಳಿ ಕುಳೆ ಪ್ರದೇಶದ ಪ್ರವಾಸಿ ಮಾರ್ಗದರ್ಶಕರು ಸಭೆ ನಡೆಸಿದರು. ಅರಣ್ಯ ಇಲಾಖೆಯು ಹೆಚ್ಚಿಸಿರುವ 50 ರೂ.ಗಳ ಶುಲ್ಕ ಹಾಗೂ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧಿಸಿರುವ 177 ರೂ.ಗಳನ್ನು ರದ್ದುಪಡಿಸುವವರೆಗೆ ಪ್ರವಾಸಿಗರನ್ನು ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಿಲ್ಲ ಎಂದು ಎಲ್ಲಾ ಮಾರ್ಗದರ್ಶಕರು ನಿರ್ಧರಿಸಿದ್ದಾರೆ. ಇದರಿಂದಾಗಿ ಜಗತ್ಪ್ರಸಿದ್ಧ ದೂಧಸಾಗರ ಜಲಪಾತಕ್ಕೆ ಟ್ರೆಕ್ಕಿಂಗ್ ತೆರಳುವುದು ಸದ್ಯಕ್ಕೆ ಸ್ಥಗಿತಗೊಂಡಂತಾಗಿದೆ.
ಮಳೆಗಾಲದಲ್ಲಿ ಬಂದ್ ಆಗಿದ್ದ ದೂಧಸಾಗರ ಜಲಪಾತ ವೀಕನೆ, ಕಳೆದ ವಾರವಷ್ಟೇ ದೂಧಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿತ್ತು. ಇದೀಗ ದೂಧಸಾಗರ ಜಲಪಾತಕ್ಕೆ ಟ್ರೆಕ್ಕಿಂಗ್ ತೆರಳಲು ಮತ್ತೆ ಪ್ರವಾಸಿರಿಗೆ ನಿರಾಸೆ ಎದುರಾಗಿದೆ.
ದೂಧಸಾಗರ ಜಲಪಾತಕ್ಕೆ ಟ್ರೆಕ್ಕಿಂಗ್ ಬರಬೇಕೆಂದಿದ್ದೀರಾ.. ಹಾಗಿದ್ದರೆ ಈ ಸುದ್ಧಿ ನೋಡಿ…!