ಪಣಜಿ: ಎರಡು ವಾರಗಳ ಹಿಂದೆ ಸುರಿದ ಧಾರಾಕಾರ ಮಳೆಯಂತೆಯೇ ಇದಿಘ ಮತ್ತೆ ದೇಶಾದ್ಯಂತ ಮಳೆ ಶುರುವಾಗಿದೆ. ಹಲವು ರಾಜ್ಯಗಳಲ್ಲಿ ಮಳೆ ಅನಾಹುತ ಮಾಡಿದೆ. ಭಾರೀ ಮಳೆ ಮತ್ತು ಪ್ರವಾಹವು ದೇಶದ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ಎರಡು ದಿನಗಳಿಂದ ಗುಜರಾತ್ ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಹಮದಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಗೋವಾದಲ್ಲಿಯೂ ಕೂಡ ಕಳೆದ ಎರಡು ದಿನಗಳಿಂದ ಮತ್ತೆ ಮಳೆ ಆರಂಭಗೊಂಡಿದೆ. ಈ ಮಳೆ ಮುಂದುವರೆಯಲಿದೆ ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಆಗಸ್ಟ್ 27 ರಂದು ದೆಹಲಿ-ಎನ್ಸಿಆರ್ನಲ್ಲಿ ಯಲ್ಲೊ ಅಲರ್ಟನ್ನು ನೀಡಲಾಗಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 27 ರಿಂದ ಆಗಸ್ಟ್ 31 ರವರೆಗೆ ಗೋವಾದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಯಲ್ಲೊ ಅಲರ್ಟ ಮಂಗಳವಾರ ಗೋಕುಲಾಷ್ಟಮಿ ಹಬ್ಬ ಮತ್ತು ಕೇವಲ ಹದಿನೈದು ದಿನಗಳ ನಂತರ ಬರುತ್ತಿರುವ ಗಣೇಶೋತ್ಸವ ರಾಜ್ಯದಲ್ಲಿ ಖರೀದಿ ಭರಾಟೆಗೆ ಸಾಕ್ಷಿಯಾಗಿದೆ. ಇದೇ ವೇಳೆ ಪಣಜಿಯಲ್ಲಿ ಮಾಂಡವಿ ದಡದಲ್ಲಿ ಅಷ್ಟಮಿ ಫೇರಿ (ಮಾರಾಟ ಮೇಳ) ಆರಂಭವಾಗಿದ್ದು, ಹಬ್ಬದ ಖರೀದಿಗೆ ಮುಗಿಬಿದ್ದಿರುವ ಗೋಮಾಂತಕಿಯರ ಉತ್ಸಾಹಕ್ಕೆ ಮಳೆಯ ರಭಸವು ನಿರಾಸೆ ಉಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕ ಮನೆ ಮಾಡಿದೆ.