ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು :ಪಿತೃ ಪಕ್ಷದ ಊಟಕ್ಕೆ ಹೋಗಲು ವ್ಯಕ್ತಿ ಓರ್ವ ಪೊಲೀಸ್ ಜೀಪ್ ಕರೆಸಿಕೊಂಡ ವಿಚಿತ್ರ ಘಟನೆ ನಡೆದಿದೆ.   ಈ ಭೂಪ 112 ಗೆ ಫೋನ್ ಮಾಡಿ ಸರ್… ಗಲಾಟೆ ಬೇಗ ಬನ್ನಿ ಅಂತ ಪೊಲೀಸರಿಗೆ ಮನವಿ ಮಾಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ ಈ ಭೂಪ.

ಗಾಡಿ ಯಾವು ಇಲ್ಲ… ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ದಾನೆ. ಈತನ ಮಾತು ಕೇಳಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ನಡೆದಿತ್ತು.ಇದೇ ಸಂದರ್ಭದಲ್ಲಿ ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿ ಪೊಲೀಸರಿಗೆ ಫೋನ್ ಮಾಡಿದ್ದಾನೆ.

ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್ ಗೆ ಪೊಲೀಸರಿಂದ ಬುದ್ದಿವಾದ.ಕೊನೆಗೆ ಪೊಲೀಸರಿಗೆ ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.