ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯಾದ್ಯಂತ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ರಾಜ್ಯ ಗೃಹ ಇಲಾಖೆ ಮುಂದಾಗಿದ್ದು ಗೋವಾ ರಾಜ್ಯದಲ್ಲಿರುವ 100 ಜನ ಧರೋಡೆಕೋರರ ವಿರುದ್ಧ ಪೋಲಿಸರು ಕ್ರಮ ಜರುಗಿಸಿದ್ದಾರೆ. ಗೋವಾ ರಾಜ್ಯದ ವಿವಿಧ 14 ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.(The State Home Department has come forward to control the increasing crimes across the state of Goa and the police have taken action against 100 robbers in the state of Goa).

 

ಗೋವಾ ರಾಜ್ಯದಲ್ಲಿ ಶಾಂತಿ ಕದಡುವವರ ವಿರುದ್ಧ , ವಿವಾದ ಸೃಷ್ಠಿಸಿ ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಡಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಪೋಲಿಸ್ ಮಹಾ ನಿರ್ದೇಶಕ ಅಲೋಕಕುಮಾರ ರವರ ಆದೇಶದಂತೆ ಈ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೋವಾ ರಾಜಧಾನಿ ಪಣಜಿಯಲ್ಲಿ 7 ಜನ ಧರೋಡೆಕೋರರು, ಕಲಂಗುಟ್ ನಲ್ಲಿ 20 ಜನ, ಓಲ್ಡ ಗೋವಾದಲ್ಲಿ 6, ಸಾಳಗಾಂವ 2, ಪೆಡ್ನೆ 10, ಮೋಪಾ 3, ಮಾಂದ್ರೆ 6, ಬಿಚೋಲಿ 16, ಆಗಶಿ 2, ಮಾಪ್ಸಾ 17, ಹಣಜುಣ 4, ಕೋಲ್ವಾಳ 11, ಪರ್ವರಿ 6, ಸೇರಿದಂತೆ ಗೋವಾದ ಒಟ್ಟೂ 14 ವಿವಿಧ ಪೋಲಿಸ್ ಠಾಣೆಗಳು ಸೇರಿ 100 ಜನ ಧರೋಡೆಕೋರರ ವಿರುದ್ಧ ಪೋಲಿಸ್ ಕ್ರಮ ಕೈಗೊಂಡಿದ್ದಾರೆ. ರಾಜ್ಯದ ಎಲ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಲಿಸ್ ಗಸ್ತು ಹೆಚ್ಚಿಸಲಾಗಿದೆ.

ಕಿನಾರಿ ಭಾಗದಲ್ಲಿ ರಾತ್ರಿಯ ವೇಳೆ ಶೇ 40 ರಷ್ಟು ಪೋಲಿಸರು ಡ್ಯೂಟಿಯಲ್ಲಿ ಇರಲಿದ್ದಾರೆ, ಹಾಗೂ ಇತರ ಪೋಲಿಸ್ ಠಾಣೆಗಳಲ್ಲಿ ರಾತ್ರಿಯ ವೇಳೆ ಶೇ 30 ರಷ್ಟು ಪೋಲಿಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.