ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಕುಂಬಾರವಾಡ ದಲ್ಲಿ ಬರುವ ಬುಧವಾರ ದಿನಾಂಕ 7 ರಂದು ಶ್ರೀ ಅಯ್ಯಪ್ಪ ಸ್ವಾಮೀಯವರ ಮಹಾಪೂಜೆ ನಡೆಯಲಿದೆ ಎಂದುಮಾಲಾಧಾರಿ ಸ್ವಾಮಿಗಳು ತಿಳಿಸಿದ್ದಾರೆ.

ಕಳೆದ ಹನ್ನೆರಡು ವರ್ಷ ಗಳಿಂದ ಕುಂಬಾರವಾಡ ದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀಯವರ ಪೂಜೆ ನಡೆಯುತ್ತಿದೆ ಅದರಂತೆ ಈ ವರ್ಷ ವೂ ಕೂಡ ಶ್ರೀ ಕ್ಷೆತ್ರಪಾಲ ರ ಸನ್ನಿಧಿಯಲ್ಲಿ ದೇವಸ್ಥಾನ ದ ಆವಾರದಲ್ಲಿ ಮಹಾಪೂಜೆ ನಡೆಯಲಿದೆ. ದಿನಾಂಕ 7ರಂದುಮದ್ಯಾಹ್ನ 12 ಘಂಟೆ ಯಿಂದ ಪೂಜೆ ಅಗ್ನಿ ಪ್ರವೇಶ, ವಡೆ ತೆಗೆಯುವ ಕಾರ್ಯ ಮಹಾಪೂಜೆ ನಡೆಯಲಿದೆ, ನಂತರ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜು ಗುರುಸ್ವಾಮಿ ನೇತೃತ್ವದಲ್ಲಿ ನಡೆಯುವ ಈ ಎಲ್ಲ ಕಾರ್ಯಕ್ರಮ ಗಳನ್ನು ಕುಮಟಾದ ಗುರುಸ್ವಾಮಿ ರಮೇಶ ಮಾಧನಗೇರಿ ನಡೆಸಿಕೊಡಲಿದ್ದು ಚಂದ್ರಕಾಂತ ದೇಸಾಯಿ ಗುರುಸ್ವಾಮಿ ಮತ್ತು ಇಪ್ಪತ್ತೆಳು ಸ್ವಾಮಿಗಳು ಭಾಗವಹಿಸುವರು ಆದಕಾರಣ ಸದ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಸ್ವಾಮಿಯೇ ಶರಣು ಅಯ್ಯಪ್ಪ ನವರ ಪೂಜೆ ಪ್ರಸಾದ ಪಡೆದುಕೊಂಡು ಕೃತಾರ್ಥ ರಾಗಲು ಕೇಳಿ ಕೊಳ್ಳಲಾಗಿದೆ.