ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯ ವಿದ್ಯಾರ್ಥಿಗಳಿಗೆ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಬೆಂಗಳೂರು ,ಇದರ ತರಬೇತಿ ಪಡೆದ ಪರಿಸರ ವಿಷಯದ ಶಿಕ್ಷಕರ ವತಿಯಿಂದ ಯಶಸ್ವಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಪರಿಸರ ವಿಷಯದ ಶಿಕ್ಷಕರನ್ನು ಬಾಮಣಗಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕರವರು ಮಕ್ಕಳಿಂದ ಹೂ ಗುಚ್ಛವನ್ನು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಶಾಲೆಯ 5 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ” ವೈಲ್ಡ್ ಶಾಲೆ”-ಪರಿಸರ ಶಿಕ್ಷಣ ಕಾರ್ಯಕ್ರಮದ ಉದ್ದೇಶದ ಕುರಿತು ಪರಿಸರ ವಿಷಯದ ತರಬೇತಿ ಶಿಕ್ಷಕರು ಮಾತನಾಡಿ ಪರಿಸರದ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣ ನೀಡುವುದು,ಪರಿಸರದ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ವನ್ಯಜೀವಿಗಳ ಸುಸ್ಥಿರತೆ ಮತ್ತು ಸರಂಕ್ಷಣಾ ಕ್ರಮಗಳನ್ನು ಉತ್ತೇಜಿಸುವುದು,ಈ ಕಾರ್ಯಕ್ರಮವು ಸ್ಥಳೀಯ ವನ್ಯಜೀವಿಗಳು,ಪರಿಸರ ಮತ್ತು ಜಾಗತಿಕ ಪರಿಸರ ಕಾಳಜಿಗಳ ಬಗ್ಗೆ 5 ಪ್ರತ್ಯಕ್ಷ ಅವಧಿಗಳನ್ನು ಒಳಗೊಂಡಿರುತ್ತದೆ.ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸುತ್ತದೆ,ತರಬೇತಿ ಪಡೆದ ಪರಿಸರ ಶಿಕ್ಷಕರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ,ಶಾಲಾ ಶಿಕ್ಷಕರನ್ನು ಇದರಲ್ಲಿ ತೊಡಗಿಸಿಕೊಳ್ಳಲು ಯೋಜಿಸಿ,ಮಾರ್ಚ ತಿಂಗಳ ವಾರ್ಷಿಕ ಪರೀಕ್ಷೆಗಿಂತ ಮೊದಲೇ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ನಂತರ ಪರಿಸರ ವಿಷಯದ ಶಿಕ್ಷಕರಿಂದ ಪ್ರಾಜೆಕ್ಟರ ಮೂಲಕ ವಿವಿಧ ಪ್ರಾಣಿ,ಪಕ್ಷಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಜೊತೆಯಲ್ಲಿ ಶಾಲೆಯ ಆವರಣದ ಮೈದಾನದಲ್ಲಿ ಶಿಕ್ಷಕರಿಂದ ಪರಿಸರದ ವಿವಿಧ ವಿಷಯದ ಕುರಿತು ಪ್ರಾಯೋಗಿಕವಾಗಿ ಆಟದ ಜೊತೆಗೆ ಪಾಠವು ನಡೆಯಿತು.ಮಕ್ಕಳು ಸಂತೋಷದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದರು,ಈ ಸಂದರ್ಭದಲ್ಲಿ ಮಕ್ಕಳು ವಿವಿಧ ಪ್ರಾಣಿ,ಪಕ್ಷಿಗಳ ಮುಖವಾಡವನ್ನು ತಮ್ಮ ಮುಖಗಳಿಗೆ ಹಾಕಿ ಪ್ರದರ್ಶಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ಕಿರಣ ಕುಮಾರ ನಾಯ್ಕ,ಸಹ ಶಿಕ್ಷಕರಾದ ಬಿ.ಚವ್ಹಾಣ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ,ಪಿಲೋಮೀನ ನರೋನ,ಸುಮನಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಕೊನೆಯಲ್ಲಿ ಶಿಕ್ಷಕಿಯಾದ ಸುಮನಾರವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ವಂದಿಸಿದರು.
