ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿ ಗುರುವಾರ ರಾತ್ರಿ ಸ್ಕೂಲ್ ಬಸ್ ಇದ್ದಕ್ಕಿದ್ದಂತೆಯೇ ಹೊತ್ತಿ ಉರಿದಿದೆ. ರಾತ್ರಿ ವೇಳೆಯಾಗಿದ್ದರಿಂದ ಬಸ್ ನಲ್ಲಿ ಯಾರೂ ಇಲ್ಲದಿದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಈ ಸ್ಕೂಲ್ ಬಸ್ ನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿಲ್ಲಿಸಲಾಗಿತ್ತು. ಸ್ಥಳೀಯರು ಅಲ್ಲಿಯೇ ಓಡಾಟ ನಡೆಸುತ್ತಿದ್ದಾಗಲೇ ಇದ್ದಕ್ಕಿದ್ದಂತೆಯೇ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ಕಂಡ ಪ್ರತ್ಯಕ್ಷದರ್ಶಿಗಳು ಕೂಡಲೇ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಕೆಲವೇ ನಿಮಿಷದಲ್ಲಿ ಅಗ್ನಿ ರೌದ್ರರೂಪ ತಾಳಿದ್ದರಿಂದ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ದಾಖಲಾದರು.ಆದೆ ಅಷ್ಟು ಹೊತ್ತಿಗಾಗಲೇ ಬಸ್ ಅಗ್ನಿಗಾಹುತಿಯಾಗಿತ್ತು. ಆದರೆ ಅಗ್ನಿ ಶಾಮಕ ದಳದ ಸಿಬ್ಬಂಧಿಗಳು ಬೆಂಕಿ ಇತರೆಡೆ ಹರಡದಂತೆ ತಡೆಗಟ್ಟಿದರು.
ಅದೃಷ್ಠವಶಾತ್ ಈ ಅಗ್ನಿ ಅವಗಡ ರಾತ್ರಿ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳು ಓಡಾಟ ನಡೆಸುವ ಈ ಬಸ್ ರಾತ್ರಿ ಅಗ್ನಿಗಾಹುತಿಯಾಗಿದೆ.
