ಸುದ್ದಿ ಕನ್ನಡ ವಾರ್ತೆ
ಭಾರತ ಗ್ಯಾಸ್ ಎಜಂಸಿಯಿಂದ ಜೋಯಡಾ ತಾಲ್ಲೂಕು ಕೇಂದ್ರ ದಲ್ಲಿ ಅಸಮರ್ಪಕ ಪುರೈಕೆ ಆಗುತ್ತಿರುವ ಬಗ್ಗೆ  ಕಾಳಿ ಬ್ರಿಗೇಡ್ಸ ಘಟನೆ ಮತ್ತು ವ್ಯಾಪಾರಸ್ಥರ ಸಂಘ ಮಾನ್ಯ ತಹಶಿಲ್ದಾರರಿಗೆ ದೂರು ನೀಡಿದ್ದರು.

ಸದರಿ ದೂರಿಗೆ ಸ್ಪಂದಿಸಿ ಮಾನ್ಯ ತಹಶಿಲ್ದಾರರು ಗ್ಯಾಸ್ ವಿತರಕರ ಮತ್ತು ಸಂಘಟನೆಗಳ ಸಂಯುಕ್ತ ಸಭೆ ಕರೆದಿದ್ದರು. ಮಾನ್ಯ ತಹಶಿಲ್ದಾರ ಮಂಜುನಾಥ್ ಮುನವಳ್ಳಿ ಇವರ ಅಧ್ಯಕ್ಷತೆಯಲ್ಲಿ ಇಂದು ಸಬೆ ನಡೆಯಿತು. ಗ್ರಾಹಕರ ಎಲ್ಲಾ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ ಪರಿಹಾರದ ಸೂತ್ರದ ಮಾರ್ಗಸುಚಿಯಂತೆ ಮುಂದಿನ ದಿನಗಳಲ್ಲಿ ಎಲ್ಲಾ ಅವ್ಯವಸ್ಥೆ ಗಳು ಸರಿಪಡಿಸುವದಾಗಿ ವಿತರಕರಾದ ರವಿ ಹಂಜಿನಮನೆಯವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ ಮತ್ತು ವ್ಯಾಪಾರಸ್ಥರ ಸಂಘದ ಪ್ರಮುಖರಾದ ರಫೀಕ್ ಖಾಜಿ ಯವರು ಗ್ರಾಹಕರ ಪರವಾಗಿ ಸಮಸ್ಯೆಗಳನ್ನು ಮಂಡಿಸಿದರು. ಸಭೆಯಲ್ಲಿ ಗ್ರಾಮ್ ಪಂಚಾಯತ್ ಉಪಾಧ್ಯಕ್ಷ ಸಂತೋಷ ಮಂಥೇರೊ, ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷ ರವಿ ರೇಡಕರ್, ಕಾಳಿ ಬ್ರಿಗೇಡ್ ಕಾರ್ಯದರ್ಶಿ ಸಮೀರ್ ಮುಜಾವರ, ಸದಸ್ಯರಾದ ಪ್ರಭಾಕರ್ ನಾಯ್ಕ್, ಕಿರಣ ನಾಯ್ಕ್, ದಿನೇಶ್ ದೇಸಾಯಿ, ಸರಳಾ ದೇಸಾಯಿ, ಶೈಲಾ ದೇಸಾಯಿ, ಪಾಂಡುರಂಗ್ ದೇಸಾಯಿ, ಗ್ಯಾಸ್ ವಿತರಕರಾದ ರವಿ ಹಂಜಿನಮನೆ,ಶ್ರೀಮತಿ ಹಂಜಿನಮನೆ ಮತ್ತು ತಹಸಿಲದಾರ ಸಿಬ್ಬಂದಿ ಗಳು ಹಾಜರಿದ್ದರು.