ಸುದ್ದಿ ಕನ್ನಡ ವಾರ್ತೆ

ಜೋಯಡಾದ “ಸಿಸ್ಟರ್ಸ್ ಆಫ್ ಅವರ ಲೇಡಿ ಆಫ್ ಫಾತಿಮಾ” ಸಂಸ್ಥೆಯ ಪ್ರಗತಿ ನಿಲಯದಲ್ಲಿ ಅನೇಕ ಅನಾಥ ರಿಗೆ ಆಶ್ರಯ ನೀಡಲಾಗಿದೆ. ಈ ಆಶ್ರಮ ಕ್ಕೆ ಇಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಮೇಶ್ ನಾಯ್ಕ್ ಭೇಟಿ ನೀಡಿ ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದರು.

ದೇಣಿಗೆಯಾಗಿ ವಿವಿಧ ರೀತಿಯ ತರಕಾರಿಗಳನ್ನು ನೀಡಿದರು. ಅಷ್ಟೇ ಅಲ್ಲದೆ ಇನ್ನೂ ಮುಂದಿನ ದಿನಗಳಲ್ಲಿ ನಾನು ಇರುವವರೆಗೂ ನಿರಂತರವಾಗಿ ಉಚಿತವಾಗಿ ತರಕಾರಿ ಪುರೈಸುವದಾಗಿ ಭರವಸೆ ನೀಡಿದರು. ಅನಾಥರಿಗೆ ಸಹಾಯ ಮಾಡುವ ಮೂಲಕ ಜನರ ಮೆಚ್ಚುಗೆ ಗೆ ಪಾತ್ರರಾದರು.

ಈ ದಾನ ನೀಡುವ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ ಮಂಥೇರೊ, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ದೇಸಾಯಿ, ಆದಿತ್ಯ ರೇಡಕರ್, ರತ್ನಾಕರ್ ದೇಸಾಯಿ, ಗೋಕುಲ ನಾಯ್ಕ್, ಕಿರಣ ನಾಯ್ಕ್, ಸತೀಶ್ ನಾಯಕ್, ದಿಗಂಬರ ದೇಸಾಯಿ, ತುಳಸಿದಾಸ ನಾಯ್ಕ್, ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿ ನಿಲಯದ ಶುಶ್ರೂಕಿ ಸ್ಮೈಲಿ ಸಿಸ್ಟರ್ ಮತ್ತು ಸಿಬ್ಬಂದಿ ಗಳು ಕಾರ್ಯಕ್ರಮ ನಡೆಸಿಕೊಟ್ಟರು . ಪ್ರಗತಿ ನಿಲಯದ ಮಕ್ಕಳಿಗೆ ಸಿಹಿ ತಿಂಡಿ ನೀಡಲಾಯಿತು.