ಸುದ್ಧಿಕನ್ನಡ ವಾರ್ತೆ
Goa: ಡಾ. ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್-DACC ತಂಡವು ಸೋಮವಾರ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರನ್ನು ಪಣಜಿಯ ಅವರ ಕಚೇರಿಯಲ್ಲಿ ಭೇಟಿಯಾಗಿ ಚರ್ಚಿಸಿತು.
ತಂಡದ ನಾಯಕತ್ವವನ್ನು ಸರ್ದಾರ್ ಇಂದರ್ ಇಕ್ಬಾಲ್ ಸಿಂಗ್ ಅಟ್ವಾಲ್ (ಮಾಜಿ ಶಾಸಕರು) ಡಾ. ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್ನ ಮಹಾನಿರ್ದೇಶಕರು, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ , ಗೋವಾ ಬಿಜೆಪಿ ಕರ್ನಾಟಕ ಸೆಲ್ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ, ಸಾಮಾಜಿಕ ಕಲ್ಯಾಣ ನಿರ್ದೇಶಕರು ಅಜಿತ್ ಪಂಚವಡ್ಕರ್, ಎಸ್ಟಿ ನಿಗಮದ ಅಧ್ಯಕ್ಷ ವಾಸುದೇವ್ ಗೌಂಕರ್, ಮತ್ತು ಆಲ್ ಗೋವಾ ಬಣಜ ಸಮಾಜ್ನ ಕಾರ್ಯದರ್ಶಿ ತೌರಪ್ಪ ಜಾಧವ್ ಅವರೊಂದಿಗೆ ಭೇಟಿ ನಡೆಸಿದರು.
ಡಾ. ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್-DACC ನ ಗೋವಾ ರಾಜ್ಯ ಅಧ್ಯಾಯದ ಉದ್ಘಾಟನಾ ಸಮಾರಂಭ, ಗೋವಾ ಸರ್ಕಾರ ಮತ್ತು DACC ನಡುವೆ ಎಸ್ಟಿ, ಎಸ್ಸಿ, ಒಬಿಸಿ ಮತ್ತು ಗೋವಾ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಸಹಭಾಗಿತ್ವದ ಕುರಿತು ಚರ್ಚಿಸಲಾಯಿತು.