ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ (ಕುಂಬಾರವಾಡಾ) ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಅಯ್ಯಪ್ಪ ಸ್ವಾಮಿ ದಿವ್ಯ ಸನ್ನಿಧಾನ,ಕುಂಬಾರವಾಡಾ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಅನ್ನದಾನ,ಅಗ್ನಿಪ್ರವೇಶ,ಹಾಗೂ ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರಪಾಲ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಬುಧವಾರ ದಿನಾಂಕ:07-01-2026 ರಂದು ಬೆಳಿಗ್ಗೆ 10-00 ಘಂಟೆಗೆ ಚಂಡಿವಾದ್ಯದ ತಾಲದೊಂದಿಗೆ ರಥಯಾತ್ರೆಯ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿಯ ಜ್ಯೋತಿ ಮೆರವಣಿಗೆ ಹಾಗೂ ಮಧ್ಯಾಹ್ನ 12-30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿಯ ಜ್ಯೋತಿ ಪೂಜೆ ನೇರವೇರಿಸಲಾಗುವುದು ಹಾಗೂ ಮಧ್ಯಾಹ್ನ 1-30 ರಿಂದ 7-00 ಘಂಟೆಯವರೆಗೆ ಅನ್ನದಾನ ಜರುಗಲಿದೆ.ಅದೇ ದಿನ ಶ್ರೀ ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ರಮೇಶ ಮಾದನಗಿರಿ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ರಾತ್ರಿ 9-00 ಘಂಟೆಗೆ ಅಗ್ನಿಪ್ರವೇಶ ಮತ್ತು ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಎಲ್ಲಾ ಭಕ್ತಾಧಿಗಳು ಆಗಮಿಸಿ ಶೃದ್ಧಾ-ಭಕ್ತಿಗಳಿಂದ ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಮಹಾಪ್ರಸಾದವನ್ನು ಸ್ವೀಕರಿಸಿ,ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂಬುದು ಗುರುಸ್ವಾಮಿ,ಸನ್ನಿದಿಯ ಸ್ವಾಮಿಗಳು ಮತ್ತು ಊರ ನಾಗರೀಕರು ಕುಂಬಾರವಾಡಾ ದಿವ್ಯ ಸನ್ನಿಧಿಯವರು ಭಕ್ತಿಪೂರ್ವಕ ವಿನಂತಿಸಿಕೊಂಡಿದ್ದಾರೆ.ಅದೇ ರೀತಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಟ್ಟುವ ಕಾರ್ಯಕ್ರಮ ದಿನಾಂಕ:10-01-2026 ರಂದು ಬೆಳಿಗ್ಗೆ 7-00 ರಿಂದ 12-00 ಘಂಟೆಯವರೆಗೆ ಕಟ್ಟಲಾಗುತ್ತದೆ.