ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಾದ್ಯಂತ ಕ್ರಿಸ್ಮಸ್ ಹಬ್ಬದ ಸಡಗರ, ಸಂಭ್ರಮದಿಂದ ಮುಗಿಯುತ್ತಿದ್ದಂತೆ 2025 ನೇ ಇಸವಿಯ ವರ್ಷದ ಅಂತ್ಯದ ಕ್ಷಣಗಣನೆ ಆರಂಭವಾಗಿದ್ದು,2026 ನೇ ಇಸವಿಯ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದ ವಾತಾವರಣ ನಿರ್ಮಾಣ ಆರಂಭವಾಗಿದೆ.
ಈಗಾಗಲೇ ರೇಸಾರ್ಟ್ ಗಳು,ಹೋಮ್ ಸ್ಟೇ ಗಳು ಮುಂಚಿತ ಬುಕಿಂಗ್,ಆಗಿ ಜನಜಂಗುಳಿಯಿಂದ ತುಂಬಿ ಹೋಗಿವೆ. ಬಹುತೇಕ ಜನರು ಹಳೆಯ ವರ್ಷದ ಕೊನೆಯ ವಿದಾಯ ಹೇಳಲು ಹಾಗೂ ಹೊಸ ವರ್ಷದ ಮೊದಲ ದಿನ ಸ್ವಾಗತಿಸಲು ತಮ್ಮ ತಮ್ಮ ಇಷ್ಟದ ಆಹಾರದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಭೋಜನವನ್ನು ಸ್ವೀಕರಿಸುವುದು ಉಂಟು.
ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿರುವ ಯಾವುದೇ ಪ್ರಾಣಿ,ಪಕ್ಷಿಗಳ ಸಂಕುಲಗಳಿರಲಿ, ನೀರಿನ ಮೂಲಗಳಾದ ಹಳ್ಳ-ಕೊಳ್ಳ,ನದಿ ಇರಲಿ ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ, ಜೀವಕ್ಕೂ ಅಪಾಯವನ್ನು ತಂದುಕೊಳ್ಳದೇ, ತ್ಯಾಜ್ಯ ವಸ್ತುಗಳ ಸರಿಯಾದ ರೀತಿಯಲ್ಲಿ ಪ್ರವಾಸದ ವೇಳೆ ವಿಲೇವಾರಿ ಮಾಡಿ ಹೊಸ ವರ್ಷದ ಆಚರಣೆಯ ಜೊತೆ ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ.
