ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಪೋರ್ ವರ್ಡ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ವಿಜಯ್ ಸರ್ದೇಸಾಯಿ ರವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿದ್ದು ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ರವರು ಭಾನುವಾರ ರಾತ್ರಿ ದಕ್ಷಿಣ ಗೋವಾದಲ್ಲಿ ವಾಸ್ತವ್ಯ ಹೂಡಿದ್ದು ಸೋಮವಾರ ಬೆಳಿಗ್ಗೆ ವಿಜಯ್ ಸರ್ದೇಸಾಯಿ ರವರು ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಭೇಟಿಯು ಕೇವಲ ಔಪಚಾರಿಕ ಭೇಟಿಯಾಗಿದ್ದರೂ ಕೂಡ ಈ ಎರಡೂ ನಾಯಕರು ಎರಡೂ ರಾಜ್ಯಗಳ ನಡುವಿನ ಹಿತದೃಷ್ಠಿಯಿಂದ ಹಲವು ಚರ್ಚೆ ನಡೆಸಿದರು. ಕರ್ನಾಟಕದಲ್ಲಿಯೂ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿ ಹಾಗೂ ವಿವಿಧ ರಾಜಕೀಯ ದೃಷ್ಠಿಯಲ್ಲಿ ಈ ಇಬ್ಬರು ನಾಯಕರ ಮಾತುಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಶಾಸಕ ವಿಜಯ ಸರ್ದೇಸಾಯಿ ರವರು ತಮ್ಮಿಬ್ಬರ ಮಾತುಕತೆ ಸಕಾರಾತ್ಮಕವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ರವರು ಕರ್ನಾಟಕದ ಕಾಂಗ್ರೇಸ್ ನಾಯಕರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ವಿಜಯ್ ಸರ್ದೇಸಾಯಿ ರವರು ಗೋವಾದಲ್ಲಿ ಪ್ರಭಾವಶಾಲಿಯಾಗಿ ಧ್ವನಿ ಎತ್ತುವ ಶಾಸಕರಾಗಿದ್ದಾರೆ. ದಕ್ಷಿಣ ಗೋವಾಕ್ಕೆ ಶಿವಕುಮಾರ್ ರವರು ಆಗಮಿಸಿರುವ ಸಂದರ್ಭದಲ್ಲಿ ಈ ಇಬ್ಬರು ನಾಯಕರ ಭೇಟಿ ರಾಜಕೀಯ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿದೆ.