ಸುದ್ದಿ ಕನ್ನಡ ವಾರ್ತೆ

ನವದೆಹಲಿ:ಅತಿ ಕಿರಿಯ ವಯಸ್ಸಿನ ಕ್ರಿಕೆಟ್ ಆಟಗಾರರಾದ ವೈಭವ್ ಸೂರ್ಯವಂಶಿ ಅವರು ತಮ್ಮ ಅಪೂರ್ವ ಕ್ರಿಕೆಟ್ ಸಾಧನೆಗಾಗಿ ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಮೃತ ಹಸ್ತದಿಂದ ಈ ಗೌರವವನ್ನು ಸ್ವೀಕರಿಸಿದರು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ದೇಶದಾದ್ಯಂತ ಮೆಚ್ಚುಗೆ ಗಳಿಸಿರುವ ವೈಭವ್ ಸೂರ್ಯವಂಶಿ ಈ ಪ್ರಶಸ್ತಿಗೆ ಪಾತ್ರರಾಗಿರುವುದು ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಅವರ ಶಿಸ್ತು,ಪರಿಶ್ರಮ ಮತ್ತು ಸಾಧನೆಗಳು ಅನೇಕ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. ಈ ಗೌರವವು ಮುಂದಿನ ದಿನಗಳಲ್ಲಿ ವೈಭವ್ ಅವರ ಕ್ರಿಕೆಟ್ ಬದುಕಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.