ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಕುರಾವಲಿಯಲ್ಲಿ ಮಲ್ಲಿಕಾರ್ಜುನ ಯೂತ್ ಕ್ಲಬ್ ನವರು ಸಂಘಟಿಸಿದ ಗ್ರಾಮೀಣ ಟೆನ್ನಿಸ್ ಬಾಲ್ ಪೂಲ್ ಪಿಚ್ ಒಪನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತಕರ್ಣಿ ತಂಡವು ರನ್ನರ್ ಅಪ್ ಪಟ್ಟವನ್ನು ಅಲಂಕರಿಸಿತು.

ಶ್ರೀ ಮಲ್ಲಿಕಾರ್ಜುನ ಆಟದ ಮೈದಾನ ಕುರಾವಲಿಯಲ್ಲಿ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ಮಾತಕರ್ಣಿ ತಂಡವು ರನ್ನರ್ ಅಪ್ ಪಟ್ಟವನ್ನು ಅಲಂಕರಿಸಿತು.