ಸುದ್ಧಿಕನ್ನಡ ವಾರ್ತೆ

ಹಳಿಯಾಳ :ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಗೆ ಶಾಸಕರು ಭೇಟಿ ನೀಡಿ, ವಿಶ್ವಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಬೌದ್ಧ ಧರ್ಮಗುರು ಪರಮಪೂಜ್ಯ ಶ್ರೀ ದಲೈಲಾಮಾ ಅವರ ದಿವ್ಯ ಆಶೀರ್ವಾದವನ್ನು ಪಡೆದರು.

ಈ ಸಂದರ್ಭದಲ್ಲಿ ಟಿಬೇಟಿಯನ್ ಸಮುದಾಯದ ಶ್ರೀಮಂತ ಸಂಸ್ಕೃತಿ,ಆಧ್ಯಾತ್ಮಿಕ ಪರಂಪರೆ ಹಾಗೂ ಬೌದ್ಧ ಧರ್ಮ ಸಾರುವ ಅಹಿಂಸೆ, ಕರುಣೆ ಮತ್ತು ಸಹಿಷ್ಣುತೆಯ ಮೌಲ್ಯಗಳು ಸಮಾಜದಲ್ಲಿ ಶಾಂತಿ,ಸೌಹಾರ್ದತೆ ಮತ್ತು ಸಹಬಾಳ್ವೆ ಬಲಪಡಿಸುವಲ್ಲಿ ನೀಡುವ ಮಹತ್ವದ ಸಂದೇಶಗಳು ಮನಸ್ಸಿಗೆ ಪ್ರೇರಣೆಯಾದವು.ಇಂತಹ ಆತ್ಮೀಯ ಭೇಟಿಗಳು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರೇರಕ ಕ್ಷಣಗಳಾಗಿವೆ.