ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ವ್ಯಾಪ್ತಿಯ ಬೊಂಡೇಲಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಕ್ಯಾಸಲ್ ರಾಕ್,ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಬೊಂಡೇಲಿ ಇವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿ ಇದರ 30ನೇ ವರ್ಷದ ಸಂಭ್ರಮ,ಪ್ರತಿಭಾ ಪುರಸ್ಕಾರ ಹಾಗೂ ಗಡಿಯಲ್ಲೊಂದು ಕಲಿಕಾ ಹಬ್ಬ-2025-26(ಬೊಂಡೇಲಿ,ಡಿಗ್ಗಿ ದುಧಮಳಾ,ಕರಂಜೆ,ಸೀಸೈ, ಮಾಯರೆ,ಅಸುಳ್ಳಿ,ಸೋಲಿಯೆ, ಭಾಮಣೆ,ಪಾತಾಗುಡಿ,ಶಿರವಳ ಶಾಲೆಗಳ ವಿದ್ಯಾರ್ಥಿಗಳಿಗಾಗಿ) ದಿನಾಂಕ:23-12-2025 ರಂದು ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಗಣ್ಯರನ್ನು ಹೂವನ್ನು ನೀಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.ನಂತರ ವಿದ್ಯಾರ್ಥಿಗಳು ಸುಶ್ರಾವ್ಯವಾದ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಘಾಟಕರಾಗಿ ಆಗಮಿಸಿದ್ದ ಗ್ರಾಮ ಪಂಚಾಯತ ಸುನಿತಾ ಹರಿಜನ ಅಧ್ಯಕ್ಷರು ಗ್ರಾಮ ಪಂಚಾಯತ ಬಜಾರಕುಣಂಗ ಸೇರಿದಂತೆ ವೇದಿಕೆಯ ಮೇಲಿನ ಎಲ್ಲಾ ಗಣ್ಯರು ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ಕಾರ್ಯಕ್ರಮದ ಅತಿಥಿ ಮಹೋದಯರನ್ನು ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವ್ಕರರವರು ಜೋಯಿಡಾ ತಾಲೂಕಿನ ಕೇಂದ್ರ ಸ್ಥಾನದಿಂದ ಅತ್ಯಂತ ದೂರವಿರುವ ಬೊಂಡೇಲಿ ಹಾಗೂ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಸಂಪರ್ಕ ಹಾಗೂ ಸಂವಹನದ ತೊಂದರೆ ಇರುವುದರಿಂದ ಕೇಂದ್ರ ಸ್ಥಾನಗಳಲ್ಲಿ ನಡೆಯುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಕಷ್ಟಕರವಾಗಿದೆ.ಕಾರಣ ಆ ವಿದ್ಯಾರ್ಥಿಗಳಿಗೂ ಕಲಿಕಾ,ಸಾಂಸ್ಕೃತಿಕ,ಕ್ರೀಡಾ ವೇದಿಕೆಯನ್ನು ಕಲ್ಪಿಸಬೇಕೆನ್ನುವ ಉದ್ದೇಶದಿಂದ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಈ ಭಾಗದ ಸಮಾನ ಮನಸ್ಕರೇ ಸೇರಿ ಸಂಘಟಿಸಿದ ಒಂದು ವಿನೂತನ ಪ್ರಯತ್ನವೇ ಗಡಿಯಲ್ಲೊಂದು ಕಲಿಕಾ ಹಬ್ಬ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿ.ಆರ್.ನಾಯ್ಕರವರು ಮಾತನಾಡಿ ಜೋಯಿಡಾ ತಾಲೂಕಿನ ಗಡಿಭಾಗದ ತುತ್ತತುದಿಯ ಮೂಲೆಯ ಭಾಗದಲ್ಲಿ ಸಂಘಟಕರು ಉತ್ತಮ ಕಾರ್ಯಕ್ರಮವನ್ನು ಸಂಘಟನೆ ಮಾಡಿರುವುದು,ಅದರಲ್ಲಿ ಭಾಗವಹಿಸುತ್ತಿರುವುದಕ್ಕೆ ತುಂಬಾ ಸಂತೋಷವೆನಿಸುತ್ತಿದೆ,ಸೈನಿಕರು ಮತ್ತು ರೈತರು ನಮ್ಮ ದೇಶದ ಬೆನ್ನೆಲುಬು,ರಾಷ್ಟ್ರೀಯ ರೈತ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇಲ್ಲಿನ ರೈತ ಬಾಂಧವರನ್ನು ಹಾಗೂ ಎಸ್ ಎಸ್ ಎಲ್ ಸಿ ಹಾಗೂ ನಂತರದ ಶಿಕ್ಷಣದಲ್ಲಿ ಉತ್ತಮ ಶೈಕ್ಷಣಿಕ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.

ಕಳೆದೆರಡು ವರ್ಷಗಳಿಂದ ನಡೆದ ಕಾರ್ಯಕ್ರಮದಲ್ಲಿಯೂ ವಿವಿಧ ಶೈಕ್ಷಣಿಕ ಕ್ಷೇತ್ರದವರನ್ನು ಗುರುತಿಸಿ ಸನ್ಮಾನ ಮಾಡಿದ ವಿಷಯವನ್ನು ಪ್ರಸ್ತಾಪಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇನ್ನೊರ್ವ ಅತಿಥಿಗಳಾದ ಎಂ ಎಸ್ ಹೆಗಡೆ ಮಾನ್ಯ ಪ್ರಾಚಾರ್ಯರು ಡಯಟ್ ಶಿರಸಿ ಮಾತನಾಡಿ ಜೋಯಿಡಾ ತಾಲೂಕಿನ ಗಡಿಭಾಗದಲ್ಲಿಯೂ ಅತ್ಯುತ್ತಮ ಶೈಕ್ಷಣಿಕ ವಿಭಾಗದ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸುವ ಮೂಲಕ ಇಲ್ಲಿನ ಜನರ ಶೈಕ್ಷಣಿಕ ಅಭಿಮಾನ ಮೆಚ್ಚುವಂತದ್ದು,ತಾವು ಸಹ ಕಳೆದೆರಡು ವರ್ಷಗಳಿಂದ ಭಾಗಿಯಾಗಿದ್ದು,ಈ ಹಿಂದೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಲಾಗದಿಂದಲೂ,ಈಗಲೂ ಇಲ್ಲಿನ ಜನರು ಅದೇ ಅಭಿಮಾನವನ್ನು ವ್ಯಕ್ತಪಡಿಸುತ್ತಿರುವುದು ತುಂಬಾ ಖುಷಿಯ ವಿಚಾರ,ಕಾರ್ಯಕ್ರಮದ ಸಂಘಟಕರು ಉತ್ತಮ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು. ಇನ್ನೊರ್ವ ಅತಿಥಿಗಳಾದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ಮಾತನಾಡಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲ್ಲಿನ ಶಿಕ್ಷಕವೃಂದದವರು,ಸಮೂಹ ಸಂಪನ್ಮೂಲ ವ್ಯಕ್ತಿಗಳು ಈ ಭಾಗದ ಮಕ್ಕಳಿಗೆ ಕಲಿಕಾ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯನ್ನು ಒಳಗೊಂಡ ಗಡಿಯಲ್ಲೊಂದು ಕಲಿಕಾ ಹಬ್ಬ ಎಂಬ ಕಾರ್ಯಕ್ರಮವನ್ನು ಸ್ಥಳೀಯ ಸಮುದಾಯ ಜನರ ಸಹಭಾಗಿತ್ವದಲ್ಲಿ ಆಯೋಜನೆ ಮಾಡಿರುವುದು ತುಂಬಾ ಒಳ್ಳೆಯ ಕಾರ್ಯ. ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ವಿಭಾಗದ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂತೋಷ ಪಾಂಡು ಮಿರಾಶಿ, ಅಧ್ಯಕ್ಷರು ಎಸ್ ಡಿ ಎಂ ಸಿ ಸರಕಾರಿ ಕಿರಿಯ ಪ್ರಾಥಮಿಕ ಬೊಂಡೇಲಿ ಶಾಲೆ ಅಧ್ಯಕ್ಷತೆಯನ್ನುವಹಿಸಿದ್ದರು. ಸುನಿತಾ ಹರಿಜನ ಅಧ್ಯಕ್ಷರು ಗ್ರಾಮ ಪಂಚಾಯತ ಬಜಾರಕುಣಂಗ, ಸದಾನಂದ ಸಾವಂತ, ಉಪಾಧ್ಯಕ್ಷರು ಗ್ರಾಮ ಪಂಚಾಯತ ಬಜಾರಕುಣಂಗ, ದೇವಿದಾಸ ರಾಮ ಮಿರಾಶಿ, ಸದಸ್ಯರು ಗ್ರಾಮ ಪಂಚಾಯತ ಬಜಾರಕುಣಂಗ,ಸಂತೋಷ ಸಾಳುಂಕೆ,ತಾಲೂಕು ಅಧ್ಯಕ್ಷರು ಕರ್ನಾಟಕ ರಾಜ್ಯ ನೌಕರರ ಸಂಘ ಜೋಯಿಡಾ,ಯಶವಂತ ನಾಯ್ಕ,ಅಧ್ಯಕ್ಷರು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಶಶಿಕಾಂತ ಕಾಂಬಳೆ ಉಪಾಧ್ಯಕ್ಷರು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಪರಮೇಶ್ವರ ಹರಿಕಾಂತ, ಮಿರಾಶಿ ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳ ಸಂಘ ಬೊಂಡೇಲಿ,ಸುಭಾಷ ವಿಠೋಬಾ ಮಿರಾಶಿ ಊರಿನ ಪ್ರಮುಖರು ಬೊಂಡೇಲಿ ಗ್ರಾಮ,ಸುಮಿತ್ರಾ ವಿಷ್ಣು ಮಿರಾಶಿ,ಉಪಾಧ್ಯಕ್ಷರು ಎಸ್ ಡಿ ಎಂ ಸಿ ಬೊಂಡೇಲಿ ಶಾಲೆ,ಮಹಾದೇವ ಹಳದನಕರ ಕಾರ್ಯದರ್ಶಿಗಳು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರಸಂಘ,ಸಂಜಯ ವಿಠೋಬಾ ಮಿರಾಶಿ ಉಪಾಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ ಬೊಂಡೇಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಆಡಳಿತ)ಡಿ.ಆರ್.ನಾಯ್ಕ,ಎಂ.ಎಸ್. ಹೆಗಡೆ ಡಯಟ್ ಪ್ರಾಚಾರ್ಯರು ಶಿರಸಿ,ಸಂತೋಷ ಸಾಳುಂಕೆ,ಅಧ್ಯಕ್ಷರು ತಾಲೂಕಾ ಕರ್ನಾಟಕ ರಾಜ್ಯ ನೌಕರರ ಸಂಘ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್, ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವನ ಸೇರಿದಂತೆ ಇನ್ನಿತರ ಗಣ್ಯರನ್ನು ಊರಿನ ಪ್ರಮುಖರ,ಗ್ರಾಮಸ್ಥರ,ಶಿಕ್ಷಕರ ವೃಂದದವರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರೈತ ಬಾಂಧವರನ್ನು,ಬೊಂಡೇಲಿ ಶಾಲೆಯಲ್ಲಿ ಕಲಿತು ಎಸ್ ಎಸ್ ಎಲ್ ಸಿ ಹಾಗೂ ನಂತರದ ಶಿಕ್ಷಣಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಹಿರಿಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಗೌರವಿಸಿ ಸನ್ಮಾನಿಸಿದರು.

ನಂತರ ಶಾಲೆಯ ಮಕ್ಕಳಿಂದ ಕಲಿಕಾ,ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ನಿರ್ಣಾಯಕರಾಗಿ ಜೋಯಿಡಾ ಹಾಗೂ ರಾಮನಗರ ಭಾಗದ ಶಿಕ್ಷಕ ವೃಂದದವರು ಸಹಕಾರ ನೀಡಿದರು.ನಂತರ ವೇದಿಕೆಯ ಮೇಲಿನ ಗಣ್ಯರು ಬಹುಮಾನ ವಿತರಿಸಿದರು. ಮಂಜುನಾಥ ಮೋರೆ,ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿವರ್ಗ ದುಧಮಳಾ ಶಾಲೆ,ಪ್ರಸನ್ನ ಹೆಚ್ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿವರ್ಗ ಡಿಗ್ಗಿ ಶಾಲೆ,ಛಾಯಾ ಡೇರೆಕರ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿವರ್ಗ ಕರಂಜೆ ಶಾಲೆ, ಬೊಂಡೇಲಿ ಶಾಲೆ,ಸೇರಿದಂತೆ ಕ್ಯಾಸಲ್ ರಾಕ್ ಕ್ಲಸ್ಟರಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಹ ಶಿಕ್ಷಕ ವೃಂದದವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ,ಕಿರಿಯ ಅಧಿಕಾರಿ ವರ್ಗದವರು,ತಾಲೂಕಿನ ಅಧಿಕಾರಿ ವರ್ಗದವರು,ಸಮೂಹ ಸಂಪನ್ಮೂಲ ವ್ಯಕ್ತಿಗಳು,ಮುಖ್ಯ ಶಿಕ್ಷಕ ವೃಂದದವರು,ಸಹ ಶಿಕ್ಷಕ ವೃಂದದವರು,ಹಳೆ ವಿದ್ಯಾರ್ಥಿಗಳ ಸಂಘದವರು,ಊರಿನ ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಕೊನೆಯಲ್ಲಿ ಸಂತೋಷ ನಾಯ್ಕ ಮುಖ್ಯ ಶಿಕ್ಷಕರು ಬೊಂಡೇಲಿ ಶಾಲೆ ಎಲ್ಲರಿಗೂ ವಂದನಾರ್ಪಣೆ ಗೈದರು.ಕಾರ್ಯಕ್ರಮದ ಸ್ವಾಗತ, ನಿರೂಪಣೆಗೆ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವ್ಕರ ಅತ್ಯುತ್ತಮ ಸಹಕಾರ ನೀಡಿದರು.