ಸುದ್ದಿ ಕನ್ನಡ ವಾರ್ತೆ
ಮಾನ್ವಿ: ತಾಲೂಕಿನಲ್ಲಿ ಈ ಬಾರಿ ತುಂಗಭದ್ರ ಜಲಾಶಯದ ಗೇಟ್‌ಗಳನ್ನು ದುರಸ್ಥಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ತುಂಗಭದ್ರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಟ್ಟಿರುವುದರಿಂದ ತುಂಗಭದ್ರ ನದಿ ತುಂಬಿ ಹರಿಯುತ್ತಿದ್ದು ನದಿಯು ಜೀವಕಳೆಯನ್ನು ತುಂಬಿಕೊAಡು ಕೈ ಬೀಸಿ ಕರೆಯುತ್ತಿದೆ.

ಡಿಸೆಂಬರ್ ತಿಂಗಳಲ್ಲಿ ಬಳಿಗಾಲ ಪ್ರಾರಂಭವಾಗುತ್ತಿರುವAತೆ ತುಂಗಭದ್ರ ನದಿಯು ಹರಿಯುವ ಗ್ರಾಮಗಳಾದ ಮದ್ಲಾಪುರ್, ಕಾತರಕಿ, ಹರನಹಳ್ಳಿ,ಚೀಕಲಪರ್ವಿ,ಯಡಿವಾಳ ಗ್ರಾಮಗಳಲ್ಲಿನ ನದಿ ಪಾತ್ರದಲ್ಲಿ ವಿವಿಧ ದೇಶಗಳಿಂದ ಅಪರೂಪದ ಪಕ್ಷಿಗಳು ಅತಿಥಿಗಳಾಗಿ ಆಗಮಿಸುವ ಪಕ್ಷಿಗಳಿಗಾಗಿ ಕಾಯುತ್ತಿರುವ ಪಕ್ಷಿ ಪ್ರೇಮಿಗಳಿಗೆ, ವನ್ಯ ಜೀವಿ ಹಾಗೂ ಪಕ್ಷಿ ಛಾಯಗ್ರಾಹಕರಿಗೆ ಈ ಬಾರಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಪಕ್ಷಿಗಳೊಂದಿಗೆ ರಾಷ್ಟçದಲ್ಲಿನ ವಿವಿಧ ಪ್ರಾಂತ್ಯಗಳಿAದ ಸುಂದರವಾದ ಪಕ್ಷಿಗಳು ನದಿಯಲ್ಲಿ ಕಾಣಸಿಗುತ್ತಿರುವುದು ಪಕ್ಷಿ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ನೆನಪಿಸುತ್ತಿದೆ.
ಈ ಬಾರಿ ತಾಲೂಕಿನ ಮದ್ಲಾಪುರ್ ಗ್ರಾಮದಲ್ಲಿನ ತುಂಗಭದ್ರ ನದಿಯಲ್ಲಿ ಟಿಬೆಟ್, ಕಜಾಕಿಸ್ತಾನ್, ಮಂಗೋಲಿಯಾ ಹಾಗೂ ಚೀನಗಳಲ್ಲಿ ಹೆಚ್ಚು ಕಂಡು ಬರುವ ಪಟ್ಟೆ-ತಲೆ ಹೆಬ್ಬಾತುಗಳು ಆಗಮಿಸಿವೆ. ಈ ಪಕ್ಷಿಗಳು ಪ್ರತಿಬಾರಿ ಕೂಡ ಚಳಿಗಾಲದಲ್ಲಿ ಮಂಗೋಲಿಯಾ ಹಾಗೂ ಚೀನ ದೇಶಗಳಿಂದ ಮಧ್ಯ ಏಷ್ಯಾದ ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಸರಿ ಸುಮಾರು 25ಸಾವಿರ ಮೀಟರ್ ಎತ್ತರದಿಂದ ಹಾರಿ 250 ಕ್ಕೂ ಹೆಚ್ಚು ಪಟ್ಟೆ-ತಲೆ ಹೆಬ್ಬಾತುಗಳು ಆಗಮಿಸುತ್ತಾವೆ, ಈ ಪಕ್ಷಿಗಳು ಬೂದು ಬಣ್ಣದಿಂದ ಕೂಡಿದ್ದು ತಲೆಯು ಕಪ್ಪುಪಟ್ಟಿಗಳಿಂದ ಕೂಡಿದ್ದು ಹಾರುವಾಗ ವಿಶಿಷ್ಟ ಕೂಗನ್ನು ಕೂಗುತ್ತಾ ಗುಂಪಿನಲ್ಲಿ ಸಾಗುತ್ತವೆ. 2ರಿಂದ 3 ಕೇಜಿ ತೂಕವಿದ್ದು ಇವುಗಳು ಹೆಚ್ಚಾಗಿ ಹುಲ್ಲು ಜಾತಿಗೆ ಸೇರಿದ ಸಸಿಗಳನ್ನು ತಿನ್ನುತ್ತಾವೆ. ನದಿಗಳಲ್ಲಿ ಹಾಗೂ ಕೆರೆಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ. ಚಳಿಗಾಲದಲ್ಲಿ ನೆಲದಲ್ಲಿ ಒಮ್ಮೆಗೆ ಮೂರರಿಂದ ನಾಲ್ಕು ಮೋಟೆಗಳನ್ನು ಇಟ್ಟು ಸಂತನೋತ್ಪತ್ತಿ ಮಾಡುತ್ತವೆ.

ಇವುಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕೆಲವು ಸಮುದಾಯದವರು ಆಹಾರಕ್ಕಾಗಿ ಬಲೆಗಳನ್ನು ಬಿಸಿ ಬೇಟೆ ಯಾಡುತ್ತಿರುವುದು ಕೂಡ ಕಂಡು ಬರುತ್ತಿದು,ಹದ್ದು ಮತ್ತು,ನಾಯಿ,ನರಿಗಳು ಕೂಡ ಇವುಗಳನ್ನು ಕೊಂದು ತಿನ್ನುತ್ತಾವೆ. ಅದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟೆ ತಲೆಯ ಹೆಬಾತುಗಳನ್ನು ಬೇಟೆಯಾಡುವವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಪಕ್ಷಿ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.

 

ತಾಲೂಕಿಗೆ ಈ ಬಾರಿ ಚÀಳಿಗಾಲದ ಅತಿಥಿಯಾಗಿ ಹಿಮಾಲಯಗಳಿಂದ ಬಯಲು ಪ್ರದೇಶಕ್ಕೆ ಹೆಚ್ಚಾಗಿ ವಲಸೆ ಬರುವ ಹಕ್ಕಿಗಳಾಗಿರುವ ಡೆಮೊಯ್ಸೆಲ್ ಕ್ರೇನ್ ಅಥಾವ ಕ್ರೌಂಚ ಪಕ್ಷಿ , ಬಿಳಿ ಬಣ್ಣದ ಆಕರ್ಷಕವಾದ ಗ್ರೇಟರ್ ಫ್ಲಾಮಿಂಗೋ ಅಥಾವ ರಾಜಹಂಸ ಪಕ್ಷಿಗಳು, ಜೋತೆಗೆ ವಿಶಿಷ್ಟವಾದ ಕೋಕಿನಿಂದ ಪ್ರಸಿದ್ದಿಯಾಗಿರುವ ಏಷ್ಯನ್ ಓಪನ್ ಬಿಲ್ ಕೊಕ್ಕರೆ, ಉಣ್ಣೆಯ ಕುತ್ತಿಗೆಯ ಕೊಕ್ಕರೆ, ಸಣ್ಣ ಬಂಡೆಗೊರವ ಸೇರಿದಂತೆ ಸ್ಥಳಿಯ ವಾಗಿರುವ ಕಪ್ಪು ನೀರು ಕಾಗೆ, ಮೋಸಳೆಗಳು,ಮಿಂಚುಳ್ಳಿ, ಸೇರಿದಂತೆ ವಿವಿಧ ಪ್ರಬೇದಗಳ ಹಕ್ಕಿಗಳು,ಕೋಕರೆ ಜಾತಿ ಹಕ್ಕಿಗಳು ನೀರಿನಲ್ಲಿರುವ ಮೀನು ಮರಿಗಳನ್ನು ಹಿಡಿದು ತಿನ್ನುವ ದೃಷ್ಯ ಅಮೋಘವಾಗಿರುತ್ತದೆ. ಎನ್ನುತ್ತಾರೆ ಮಾನ್ವಿಯ ಪಕ್ಷಿ ಪ್ರೇಮಿ ಸಲ್ಲಾವುದ್ದಿನ್ನ್

ಮಾನ್ವಿಯಿಂದ ತುಂಗಭದ್ರ ನದಿ ಹರಿಯುವ ಗ್ರಾಮಗಳ ದೂರ 8 ಕಿ,ಮಿ. ಮದ್ಲಾಪೂರ ಗ್ರಾಮ,16 ಕಿ,ಮಿ,ಚೀಕಲಪರ್ವಿ ಗ್ರಾಮ, 8ಕಿ.ಕಿ.ಮೀ. ಕಾತರಕಿ ಗ್ರಾಮ ವಿದ್ದು ಪಕ್ಷಿ ಪ್ರೇಮಿಗಳು ತುಂಗಭದ್ರನದಿಯಲ್ಲಿನ ಪಕ್ಷಿಗಳನ್ನು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಗುಂಪು,ಗುAಪಾಗಿ ವಿಕ್ಷೀಸುವುದಕ್ಕೆ ಹಾಗೂ ಹಕ್ಕಿಗಳ ಉತ್ತಮ ಛಾಯ ಚಿತ್ರಗಳನ್ನು ಕೂಡ ಸೇರೆಹಿಡಿಯುವುದಕ್ಕೆ ಕೂಡ ಅವಕಾಶವಿದೆ.