ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ಪ್ರಭಾಕರ ರಾಣೆ ಯವರ ಶಿಕ್ಷಣ ಪ್ರೇಮ ಜೋಯಿಡಾ ತಾಲೂಕಿನ ಬಡ ಮಕ್ಕಳ ಬದುಕಿಗೆ ಆಸರೆಯಾಗಿದೆ, ಈ ಸಂಸ್ಥೆಯನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸೋಣ. ತಾಯಿ ತಂದೆಯಲ್ಲಿ ಗೌರವ ಇಡಿ. ಸ್ವಚ್ಚ, ಸಂಮೃದ್ದ ಮನೋವೃತ್ತಿಯ ಸುಂಸ್ಕೃತರಾಗಿ ಬಾಳಿ ಎಂದು ಬಿ. ಜಿ. ವಿ. ಎಸ್. ಸಂಸ್ಥೆಯ ಅಧ್ಯಕ್ಷೆ ವನಿತಾ ರಾಣೆ ಹೇಳಿದರು. ಅವರು ಬಿ ಜಿ ವಿ ಎಸ್ ಕಾಲೇಜಿನ. ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷಉಲ್ಲಾಸನಾಯ್ಕಪಕ್ಷಪಾತ ಮರೆತು ಶಿಕ್ಷಣದ ಅಭಿವೃದ್ದಿಗೆಎಲ್ಲವರ್ಗದವರು ಕೈಜೋಡಿಸಬೇಕು ಮಕ್ಕಳು ಪಾಲಕರ ಶ್ರಮಕ್ಕೆ ಪ್ರತಿಫಲನೀಡುವಂತೆ ಬೆಳೆಯ ಬೇಕೆಂದು ಕರೆ ನೀಡಿದರು. ಸಂಸ್ಥೆಯ ಸ್ಥಳಿತ ಸಮಿತಿ ಕಾರ್ಯದರ್ಶಿ ರವಿ ರೆಡ್ಕರಗಾಂದಿಜಿಯ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಿದ ಒರ್ವ ಮಹಾನ ವ್ಯಕ್ತಿಪ್ರಭಾಕರ ರಾಣೆ. ಅವರ ಕನಸಿನ ಬಾಪೂಜಿ ಸಂಸ್ಥೆ ಜೋಯಿಡಾದಂತ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೆ ಕಾಲೇಜು ಶಿಕ್ಷಣನೀಡಿ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಿದೆ. ಮೋಬೈಲ ಕ್ರೀಕೇಟ ದೂರವಿಟ್ಟು ಶಿಕ್ಷಣದ ಕಡೆಗೆ ಮಕ್ಕಳು ಲಕ್ಷ ವಹಿಸಬೇಕು ಪಾಲಕರು ಎಚ್ಚರ ವಹಿಸಬೇಕೆಂದು ಹೇಳಿದರು.
ಭಾಷೆ ಯಾರಮಿತಿಗೂಒಳಪಟ್ಟಿಲ್ಲ, ಶಿಕ್ಷಣ ಪಡೆಯುವ ಭಾಷೆಗೆ ಹೆಚ್ಚಿನ ಮಹತ್ವ ನೀಡಿ, ಮಕ್ಕಳಿಗೆ ಈಗಲೇಸಾಮಾಜಿಕ ಜವಾಬ್ದಾರಿ ಬೆಳೆಸಿ, ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಅವರ ಬುದ್ದಿಮತ್ತೆ ಬೆಳೆಸಿಕೊಳ್ಳಿ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪವಾರ ಹೇಳಿದರು
ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆ ಎಂಬ ನಾಲ್ಕು ಕಂಬಗಳಿದ್ದಂತೆ ಎಲ್ಲರ ಪ್ರಯತ್ನ ದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ.ಎಂದು ಸಂಸ್ಥೆಯ ಸಹ ಕಾರ್ಯದರ್ಶಿ ಕಿಶೋರ ರಾಣೆ ಹೇಳಿದರು.
ಸಂಸ್ಥೆಯ ಸದಸ್ಯ ತುಕಾರಾಮ ಮಾಂಜ್ರೇಕರ ಮಾತನಾಡಿದರು. ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿ ಸಹಕಾರ ನೀಡುತ್ತಿರುವರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದಸುನೀಲ ದೇಸಾಯಿ, ಚಂದ್ರಕಾಂತ ದೇಸಾಯಿ, ಶ್ಯಾಮ ಪೋಕಳೆ, ಮಾಬಳು ಕುಂಡಲ್ಕರ ಇದ್ದರು
ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮುಕ್ತಾಯ ವಾಯಿತು
