ಸುದ್ಧಿಕನ್ನಡ ವಾರ್ತೆ
Goa: ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಆಘಾತಕಾರಿಯೂ ಆಗಿದೆ. ಈ ಮಾಧ್ಯಮದ ಮೂಲಕ ಅತಿ ವೇಗವಾಗಿ ಸುದ್ಧಿಗಳು ಹರಡುವುದನ್ನು ನಾವು ಕಾಣಬಹುದು. ಆದರೆ ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂಬುದು ಮಾತ್ರ ಗೊಂದಲ ಮೂಡಿಸುತ್ತದೆ.
ಗೋವಾದ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿ 26 ಜನ ಸಾವನ್ನಪ್ಪಿದ್ದಾರೆ ಹಾಗೂ 64 ಜನರು ಕಾಣೆಯಾಗಿದ್ದಾರೆ ಎಂಬ ವೀಡಿಯೊವೊಂದು ಶನಿವಾರ ಬೆಳಿಗೆಯಿಂದಲೇ ಸಾಮಾಜಿಕ ಜಾಲ ತಾಣಗಳಲ್ಲಿ ಬಹು ವೇಗವಾಗಿ ಹರಿದಾಡುತ್ತಿದೆ. ಇದೀಗ ಈ ವೀಡಿಯೋದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳೋಣ.
ಗೋವಾದ ಸಮುದ್ರದಲ್ಲಿ ಬೋಟ್ ಮುಳುಗುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಹಾಗೂ 64 ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂಬ ಸುದ್ಧಿ ಭಾರಿ ಹರಿದಾಡುತ್ತಿದೆ. ರಾಣಾ ಸಂಗಾ ಎಂಬ ಎಕ್ಸ ಅಕೌಂಟ್ ನಿಂದ ಈ ವೀಡಿಯೋ ಶೇರ್ ಮಾಡಲಾಗಿದೆ. ಈ ವೀಡಿಯೋ ಗೋವಾ ರಾಜ್ಯದ ವೀಡಿಯೋ ಅಲ್ಲ. ಗೋವಾದಲ್ಲಿ ಇಂತಹ ಯಾವುದೇ ದುರ್ಘಟನೆ ಸಂಭವಿಸಿಲ್ಲ. ದಿನಪತ್ರಿಕೆ ರೈಟರ್ಸ ಪ್ರೇಸ್ ಅಸೋಸಿಯೆಟ್ ಅಧೀಕ್ರತ ಮಾಹತಿ ಬಿಡುಗಡೆಗೊಳಿಸಿದ್ದು, ಈ ಘಟನೆ ಆಫ್ರಿಕಾ ಖಂಡದ ಕಾಂಗೊ ಎಂಬಲ್ಲಿ ನಡೆದಿದೆ ಎಂದು ಖಚಿತಪಡಿಸಿದೆ.
ಈ ವೀಡಿಯೊ ಗೋವಾ ರಾಜ್ಯದಲ್ಲಿ ನಡೆದ ಘಟನೆಯಲ್ಲ, ಆದ ಕಾರಣ ಈ ವೀಡಿಯೊವನ್ನು ಯಾರೂ ಶೇರ್ ಮಾಡಬಾರದು ಎಂದು ಗೋವಾ ಪೋಲಿಸರು ಜನತೆಯಲ್ಲಿ ಮನವಿ ಮಾಡಿದ್ದಾರೆ.