ಸುದ್ಧಿಕನ್ನಡ ವಾರ್ತೆ
Goa: ಗೋವಾದ  RSS  ಮಾಜಿ ಮುಖ್ಯಸ್ಥ  ಸುಭಾಷ ವೇಲಿಂಗಕರ್ ರವರು ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ರವರ  DNA  ತಪಾಸಣೆ ನಡೆಸಬೇಕು ಎಂದು ನೀಡಿರುವ ಹೇಳಿಕೆ ಕಳೆದ ಎರಡು ದಿನಗಳ ವಾದ ವಿವಾದಕ್ಕೆ ಕಾರಣವಾಗಿದೆ.

ಸುಭಾಷ ವೇಲಿಂಗಕರ್ ನೀಡಿರುವ ಈ ಹೇಳಿಕೆಯಿಂದ ಅವರನ್ನು ಬಂಧಿಸುವಂತೆ ಗೋವಾದ ಕ್ರೈಸ್ತ ಬಾಂಧವರು ಆಘ್ರಹಿಸಿದ್ದಾರೆ. ಕ್ರೈಸ್ತ ಬಾಂಧವರು ರಾಜ್ಯಾದ್ಯಂತ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹಿಂದೂತ್ವವಾಧಿ ಸಂಘಟನೆಗಳು ಸುಭಾಷ ವೇಲಿಂಗಕರ್ ರವರ ಬೆಂಬಲಕ್ಕೆ ನಿಂತು ಹೋರಾಟಕ್ಕಿಳಿದಿದ್ದಾರೆ.

RSS  ಮಾಜಿ ಮುಖ್ಯಸ್ಥ ಸುಭಾಷ ವೇಲಿಂಗಕರ್ ವಿರುದ್ಧಗೋವಾದ ವಿವಿಧ ಪೋಲಿಸ್ ಠಾಣೆಗಳಲ್ಲಿ ಕ್ರೈಸ್ತ ಬಾಂಧವರು ದೂರು ನೀಡಲು ಆರಂಭಿಸಿದ್ದಾರೆ. ಸಂತ ಫ್ರಾನ್ಸಿಸ್ ಜೇವಿಯರ್ ರವರ ಶವದ DNA  ತಪಾಸಣೆ ನಡೆಸಬೇಕು ಎಂದು ಹೇಳಿರುವ ಹೇಳಿಕೆ ವಿರುದ್ಧ ಗೋವಾ ರಾಜ್ಯಾದ್ಯಂತ ಕ್ರೈಸ್ತ ಬಾಂಧವರಿಂದ ಆಕ್ರೋಷ ವ್ಯಕ್ತವಾಗುತ್ತಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾಂವ ರವರು ವೇಲಿಂಗಕರ್ ವಿರುದ್ಧ ಕೋಲ್ವಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಗೋವಾದ ವಿವಿಧ ಪೋಲಿಸ್ ಠಾಣೆಗಳಲ್ಲಿ ಸುಭಾಷ ವೇಲಿಂಗಕರ್ ವಿರುದ್ಧ ದೂರು ದಾಖಲಾಗಿದೆ. ವೇಲಿಂಗಕರ್ ರವರು ನೀಡಿರುವ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದ್ದು ಕ್ರೈಸ್ತ ಬಾಂಧವರು ಪ್ರತಿಭಟನೆಗೆ ಮುಂದಾಗಿದ್ದಾರೆ.