ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಡಿಸೆಂಬರ್ 20 ರಂದು ನಡೆದ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ದಾಖಲೆಯ ರೀತಿಯಲ್ಲಿ ಶೇ 70.81 ರಷ್ಟು ಮತದಾನವಾಗಿದೆ. ಇದರಿಂದಾಗಿ ಪ್ರಸಕ್ತ ಚುನಾವಣೆಯ ಮತದಾರರ ಶೇಖಡಾವಾಗು ಹೆಚ್ಚಿನ ಮತದಾನದ ಫಲಿತಾಂಶದ ಕುರಿತು ರಾಜ್ಯಾದ್ಯಂತ ತೀವ್ರ ಕುತೂಹಲ ಹೆಚ್ಚಿಸಿದೆ.
ಡಿಸೆಂಬರ್ 22 ರಂದು ಸೋಮವಾರ(ಇಂದು) ಬೆಳಿಗ್ಗೆ 8 ಗಂಟೆಯಿಂದ ರಾಜ್ಯದ 14 ಕೇಂದ್ರಗಳಲ್ಲಿ ಪೋಲಿಸ್ ಭಧ್ರತೆಯಲ್ಲಿ ಮತ ಎಣಿಕೆ ಆರಭಗೊಳ್ಳಲಿದೆ. ಮಧ್ಯಾನ್ಹದ ವೇಳೆಗೆ ಬಹುತೇಕ ಎಲ್ಲ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಸಕ್ತ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ. ಪ್ರಸಕ್ತ ರ್ವ ಮತದಾನ ಪ್ರಮಾಣದ ಹೆಚ್ಚಳವು ರಾಜಕೀಯ ಸಮೀಕರಣಗಳಲ್ಲಿ ದೊಡ್ಡ ಏರಿಳಿತವಾಗುವ ಸಾಧ್ಯತೆಯಿದೆ. ಗೋವಾದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಿದ್ದರಿಂದ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.
ಎಲ್ಲ ಮತಪೆಟ್ಟಿಗೆಗಳನ್ನು ಆಯಾ ತಾಲೂಕಿನಲ್ಲಿ ಸ್ಟ್ರಾಂಗ್ ರೂಂ ನಲ್ಲಿ ಇಡಲಾಗಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಬಾರ್ದೇಸ್,ಸಾಸಷ್ಠಿ, ಮತ್ತು ಪೊಂಡಾ ಈ ದೊಡ್ಡ ತಾಲೂಕುಗಳಲ್ಲಿ ತಲಾ ಎರಡು ಕೇಂದ್ರಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
ಫಲಿತಾಂಶ ಹೊರಬಿದ್ದ ಕೂಡಲೇ ಜಿಲ್ಲಾ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವೇಗ ಪಡೆದುಕೊಳ್ಳಲಿದೆ. ಯಾವ ಯಾವ ಕ್ಷೇತ್ರದಲ್ಲಿ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬುದರ ಮೇಲೆ ರಾಜಕೀಯ ದಿಕ್ಕು ಬದಲಾಗಲಿದೆ.
