ಸುದ್ದಿ ಕನ್ನಡ ವಾರ್ತೆ

ಶಿರಸಿ:- ಹಿರಿಯ ಸಹಕಾರಿ, ಹಿರಿಯ ರಾಜಕಾರಣಿಯಾಗಿದ್ದ ತಾಲೂಕಿನ ಬಕ್ಕಳ ಸಮೀಪದ ಆಲದಮನೆಯ ಸತ್ಯನಾರಾಯಣ ಹೆಗಡೆ (89)ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಬಕ್ಕಳ‌ ಎಂ.ಪಿ ಸೊಸೈಟಿ, ಕೃಷಿ ಮತ್ತು ಕ್ಷೀರ ಉತ್ಪಾದಕರ ಸಂಘ , ಹುಲೇಕಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದರಲ್ಲದೆ ಶಿರಸಿ ಟಿಎಸ್ ಎಸ್ , ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಸೇರಿದಂತೆ ಹಲವು ಸಹಕಾರಿ ಸಂಘಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.‌

ಹುಲೆಕಲ್ ಮಂಡಳ ಪಂಚಾಯತ್ ಅಧ್ಯಕ್ಷರಾಗಿ, ಸದಸ್ಯರಾಗಿ ಕಾಂಗ್ರೆಸ್ ನ ಹಿರಿಯ ಧುರೀಣರಲ್ಲಿ ಒಬ್ಬರಾಗಿದ್ದರಲ್ಲದೆ ಶ್ರೀಪಾದ ಹೆಗಡೆ ಕಡವೆ, ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅವರ ಆಪ್ತ ಒಡನಾಡಿಯಾಗಿದ್ದರು. ಸ್ಥಳೀಯ ದೇವಸ್ಥಾನ, ಶಾಲೆ ಗಳ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದರು.

ಮೃತರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹೆಗಡೆಯವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.