ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ನಗರದಲ್ಲಿಂದು ಯಶಸ್ವಿಗೊಂಡ ಸುಸ್ವರ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವ ಸುಸ್ವರ ಸಂಭ್ರಮ -2025 ಕಾರ್ಯಕ್ರಮ ಅತ್ಯಂತ ಸುಂದರವಾಗಿ ನಡೆಯಿತು. ಹಲವು ವರ್ಷಗಳಿಂದ ಸಂಗೀತ ಶಿಕ್ಷಕಿಯಾದ ಶ್ರೀಮತಿ ಶಶಿಕಲಾ ಭಟ್ಟಗೋಪಿಯವರು ಮಕ್ಕಳಿಗೆ, ಮಾತೆಯರಿಗೆ ಸಂಗೀತ ತರಬೇತಿ ನೀಡುವ ಮೂಲಕ ನೂರಾರು ಪ್ರತಿಭಾನ್ವಿತರನ್ನು ಗುರುತಿಸಿ ಉತ್ತಮ ಕಲಾವಿದರನ್ನಾಗಿ ರೂಪಿಸಿದ್ದಾರೆ. ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಷ್ಯರು ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.
ಕಾರ್ಯಕ್ರಮದ ಉದ್ಘಾಟನೆ ಗೋಕರ್ಣದ ಸ್ವರಾತ್ಮಕ ಗುರುಕುಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅಶೋಕೆಯ ಪ್ರಾಚಾರ್ಯರಾದ ಡಾ. ಹರೀಶ್ ಹೆಗಡೆಯವರು ನೆರವೇರಿಸಿದರೆ ಅತಿಥಿಗಳಾಗಿ ಕಸಾಪ ದಾಂಡೇಲಿ ಅಧ್ಯಕ್ಷರಾದ ನಾರಾಯಣ ನಾಯ್ಕ ಹಾಗೂ ಸಾಹಿತಿ ದೀಪಾಲಿ ಸಾಮಂತರವರು ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಸಂಸ್ಥೆಯ ಸಾಧನೆಯ ಕುರಿತು ಮೆಚ್ಚುಗೆ ಸೂಚಿಸಿ ಮಕ್ಕಳಿಗೆ ಇಂತಹ ಅದ್ಭುತ ಕಲೆಯನ್ನು ಕಲಿಸುವ ಪಾಲಕರಿಗೂ ಅಭಿನಂದಿಸಿದರು.
ನಂತರ ನಡೆದ ರಾಗಾಂತರಂಗ ಗಾನಯಾನ ಕಾರ್ಯಕ್ರಮವು ಡಾ. ಹರೀಶ ಹೆಗಡೆಯವರ ನಿರ್ದೇಶನದಲ್ಲಿ ಶ್ರೀಹರಿ ಕುಲಕರ್ಣಿ ವಿಜಯಪುರ, ಶಶಿಕಲಾ ಭಟ್ಟಗೋಪಿ ದಾಂಡೇಲಿ, ದೀಪಾ ಹೆಗಡೆ ಶಿರಸಿ, ಸಂಧ್ಯಾ ಹೆಗಡೆ ಕುಮಟಾ, ಕವಿತಾ ಹೆಗಡೆ ಗೋಕರ್ಣರವರ ಧ್ವನಿಯಲ್ಲಿ
ಸಂವಾದಿನಿಯಾಗಿ ಸತೀಶ ಭಟ್ಟ ಹೆಗ್ಗಾರ,ತಬಲಾದಲ್ಲಿ ಗಣೇಶ ಭಾಗ್ವತ ಗುಂಡ್ಕಲ್ ಹಾಗೂ ನಾಗೇಂದ್ರ ವೈದ್ಯ ವೈದ್ಯಹೆಗ್ಗಾರರವರು ಸಾಥ್ ನೀಡಿದರು. ಸಂಗೀತದ ರಸದೂಟ ಉಣಬಡಿಸಿದ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತು.
