ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಗೆ (New Year Celebration) ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು ಈಗಾಗಲೇ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸುವ ಪ್ರಮುಖ ವಿಮಾನ ಟಿಕೆಟ್ ದರದಲ್ಲಿ ಹೆಚ್ಚಳವಾಗಿದೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಹೆಚ್ಚಳದಿಂದಾಗಿ ಮುಂಬಯಿ, ದೆಹಲಿ, ಬೆಂಗಳೂರು, ಜಯಪುರ, ಇಂತಹ ಪ್ರಮುಖ ಶಹರಗಳಿಂದ ಗೋವಾಕ್ಕೆ ಆಗಮಿಸಲು ವಿಮಾನ ದರ ಹೆಚ್ಚಳವಾಗಿದೆ.
ಬೆಂಗಳೂರಿನಿಂದ ಗೋವಾಕ್ಕೆ ಇದುವರೆಗಿನ ವಿಮಾನ ಟಿಕೇಟ್ ದರ 3,521 ರೂ ಆದರೆ ಡಿಸೆಂಬರ್ ರಂದು ಈ ದರ 6765 ರೂ ಗಳಿಗೆ ಏರಿಕೆಯಾಗಿದೆ. ದೆಹಲಿಯಿಂದ ಗೋವಾಕ್ಕೆ ಡಿಸೆಂಬರ್ 24 ರಂದು 8834 ರೂಗಳಿಗೆ ಏರಿಕೆಯಾಗಿದೆ. ಮುಂಬಯಿಯಿಂದ ಗೋವಾಕ್ಕೆ 3,675 ರೂಗಳಿದ್ದ ದರ 5900 ರೂಗಳಿಗೆ ಏರಿಕೆಯಾಗಿದೆ. ಜಯಪುರದಿಂದ ಡಿಸೆಂಬರ್ 30 ಕ್ಕೆ ಗೋವಾಕ್ಕೆ ಆಗಮಿಸಲು 13,598 ರೂಗಳನ್ನು ತೆರಬೇಕಾಗಲಿದೆ. ಇದು ಅತಿ ಹೆಚ್ಚಿನ ದರ ಏರಿಕೆಯಾಗಿದೆ.
ಗೋವಾಕ್ಕೆ ಆಗಮಿಸುವ ರೈಲ್ವೆಗಳು ಫುಲ್...
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸುವ ರೈಲ್ವೆಗಳು ಮುಂಗಡ ಬುಕಿಂಗ್ ಆಗಿದ್ದು ರೈಲ್ವೆ ಭೋಗಿಗಳು ಫುಲ್ ಆಗಿವೆ. ವೇಟಿಂಗ್ ಲೀಸ್ಟ ನಲ್ಲಿ ಕನ್ ಫರ್ಮ ಆಗುವ ಸಾಧ್ಯತೆಗಳು ಶೇ 50 ಕ್ಕಿಂತ ಕಡಿಮೆ ಆಗಿದೆ. ಇದರಿಂದಾಗಿ ಗೋವಾಕ್ಕೆ ಆಗಮಿಸಲಿಚ್ಚಿಸಿದ್ದ ಇನ್ನೂ ಹೆಚ್ಚಿನ ಪ್ರವಾಸಿಗರಿಗೆ ರೈಲ್ವೆ ಪ್ರವಾಸ ನಿರಾಸೆಯಾಗುವ ಸಾಧ್ಯತೆಯಿದೆ.
ಸುರಕ್ಷತೆಗಾಗಿ ಗೋವಾ ಪೋಲಿಸರ ಮಾಸ್ಟರ್ ಪ್ಲ್ಯಾನ್…
ಗೋವಾದಲ್ಲಿ ಹೆಚ್ಚುತ್ತಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಗೋವಾ ಪೋಲಿಸರು ಕಿನಾರಿ ಭಾಗದಲ್ಲಿ ಅಧಿಕ ಸುರಕ್ಷಾ ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರವಾಸಿಗರ ಗರ್ದಿ ಇರುವ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಗದಂತೆ ಪೋಲಿಸರು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಉತ್ತರ ಗೋವಾ ಬೀಚ್ ಗಳಲ್ಲಿ ಅಧಿಕ ಭಧ್ರತೆಗಾಗಿ 10 ಆಯ್ ಆರ್ ಬಿ ತುಕಡಿಗಳನ್ನು ನಿಯೋಜಿಸಲಾಗಿದೆ. ಮಾರ್ಕೇಟ್, ರೈಲ್ವೆ ಸ್ಟೇಶನ್, ಬಸ್ ನಿಲ್ದಾಣಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದು ಹಿರೀಯ ಪೋಲಿಸ್ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
