ಸುದ್ದಿ ಕನ್ನಡ ವಾರ್ತೆ

ಖಾನಾಪುರ:ತಾಲೂಕಿನ
ಶಾಂತಿ ನಿಕೇತನ ಪಬ್ಲಿಕ್ ಶಾಲೆ ತೋಪಿನಕಟ್ಟಿ ರಸ್ತೆ ಖಾನಾಪುರದಲ್ಲಿ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮ‌‌ ಹಾಗೂ‌ ಡಿ.ದೇವರಾಜ ಅರಸು‌ ಹಿಂದುಳಿದ ವರ್ಗಗಳ‌ ಅಭಿವೃದ್ಧಿ ನಿಗಮ ವತಿಯಿಂದ ದಿನಾಂಕ:18-12-2025 ರ ಗುರುವಾರದಂದು ನಡೆದ ಮರಾಠ ಸಮುದಾಯಗಳ ರೈತರಿಗೆ ಚಕ್ಕೆ ಬೆಳೆ ತರಬೇತಿ ಹಾಗೂ ಧನಗರ ಗೌಳಿ ಸಮುದಾಯಕ್ಕೆ ಪಶುಪಾಲನಾ ಯೋಜನೆಯ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ‌ ವಿಧಾನ‌ ಪರಿಷತ್ ಸದಸ್ಯರಾದ ‌ಶಾಂತಾರಾಮ ‌ಸಿದ್ದಿಯವರು‌ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ ವಿಠ್ಠಲ ಸೋಮಣ್ಣಾ ಹಲಗೇಕರರವರು , ಜಿ.ಹೆಚ್.ಮರಿಯೋಜಿರಾವ್
ಮಾನ್ಯ ಅಧ್ಯಕ್ಷರು,ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ತುಳಸಿ ಮದ್ದಿನೇನಿ,ಸರಕಾರದ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು, ನಟರಾಜ ಜಿ.ಆ‌ರ್. ವ್ಯವಸ್ಥಾಪಕ ನಿರ್ದೇಶಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,ಬೆಂಗಳೂರು,
ಡಾ. ಪ್ರಕಾಶ ಪಾಗೋಜಿ
ವ್ಯವಸ್ಥಾಪಕ ನಿರ್ದೇಶಕರು. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
ತರಬೇತಿದಾರರಾದ ಡಾ.ಸುದೇಶ ಕುಲಕರ್ಣಿ, ಅಧೀಕ್ಷಕರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ,ಶಿರಸಿ ಹಾಗೂ ಇನ್ನಿತರ ಸಮುದಾಯದ ಪ್ರಮುಖರು‌ ಫಲಾನುಭವಿಗಳು‌ ಉಪಸ್ಥಿತರಿದ್ದರು.