ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ವ್ಯಾಪ್ತಿಯ ಬೊಂಡೇಲಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಕ್ಯಾಸಲ್ ರಾಕ್,ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಬೊಂಡೇಲಿ ಇವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿ ಇದರ 30ನೇ ವರ್ಷದ ಸಂಭ್ರಮ,ಪ್ರತಿಭಾ ಪುರಸ್ಕಾರ ಹಾಗೂ ಗಡಿಯಲ್ಲೊಂದು ಕಲಿಕಾ ಹಬ್ಬ-2025-26(ಬೊಂಡೇಲಿ,ಡಿಗ್ಗಿ ದುಧಮಳಾ,ಕರಂಜೆ,ಸೀಸೈ, ಮಾಯರೆ,ಅಸುಳ್ಳಿ,ಸೋಲಿಯೆ, ಭಾಮಣೆ,ಪಾತಾಗುಡಿ,ಶಿರವಳ ಶಾಲೆಗಳ ವಿದ್ಯಾರ್ಥಿಗಳಿಗಾಗಿ) ದಿನಾಂಕ:23-12-2025 ರ ಮಂಗಳವಾರ ಸಮಯ:9:00 ಗಂಟೆಗೆ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೊಂಡೇಲಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಪ್ರತಿನಿಧಿಗಳು,ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ,ಕಿರಿಯ ಅಧಿಕಾರಿ ವರ್ಗದವರು,ತಾಲೂಕಿನ ಅಧಿಕಾರಿ ವರ್ಗದವರು,ಸಮೂಹ ಸಂಪನ್ಮೂಲ ವ್ಯಕ್ತಿಗಳು,ಮುಖ್ಯ ಶಿಕ್ಷಕ ವೃಂದದವರು,ಸಹ ಶಿಕ್ಷಕ ವೃಂದದವರು,ಹಳೆ ವಿದ್ಯಾರ್ಥಿಗಳ ಸಂಘದವರು ಊರಿನ ಪ್ರಮುಖರು ಉಪಸ್ಥಿತರಿರಲಿದ್ದಾರೆ.ಹಳೆ ವಿದ್ಯಾರ್ಥಿಗಳ ಸಂಘ ಬೊಂಡೇಲಿ ಹಾಗೂ ಸಮಸ್ತ ಗ್ರಾಮಸ್ಥರು ಬೊಂಡೇಲಿ ಸರ್ವರಿಗೂ ಆದರದ ಆಮಂತ್ರಣವನ್ನು ಕೋರಿದ್ದಾರೆ.
