ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದ ಬೆಂಗಳೂರಿನಲ್ಲಿ ಬೆಳೆಯುವ “ಲಾಲಬಾಗ್ ” ಜಾತಿಯ ಮಾವಿನ ಹಣ್ಣು ಗೋವಾದ ಬಿಚೋಲಿ ಮಾರುಕಟ್ಟೆಯಲ್ಲಿ ಆವಕವಾಗಿದೆ. ಗೋವಾದಲ್ಲಿ ಪ್ರಸಕ್ತ ವರ್ಷ ಮಾವಿನ ಹಣ್ಣಿನ ಸೀಜನ್ ಆರಂಭಗೊಳ್ಳುವ ಮುನ್ನವೇ ಮಾವಿನ ಹಣ್ಣಿನ ಆಗಮನವಾಗಿದೆ. ಸದ್ಯ 200 ರೂ ಪ್ರತಿ ಕೆಜಿಯಂತೆ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಕಂಡುಬರುತ್ತಿದೆ.

ಗೋವಾದಲ್ಲಿ ಲಾಲ್ ಬಾಗ್ ಮಾವಿನ ಹಣ್ಣಿನೊಂದಿಗೆ ತೋತಾಪುರಿ ಮಾವಿನ ಹಣ್ಣು ಕೂಡ ಮಾರುಕಟ್ಟೆಗೆ ಬಂದಿದ್ದು 150 ರೂ ಪ್ರತಿ ಕೇಜಿಯಂತೆ ಮಾರಾಟ ಮಾಡಲಾಗುತ್ತಿದೆ.

ಗೋವಾದ ಮಾವಿನ ಹಣ್ಣಿನ ರಾಜ ಎಂದೇ ಪ್ರಸಿದ್ಧಿ ಪಡೆದಿರುವ ಮಾನಕುರಾದ್ ಮಾವಿನ ಹಣ್ಣಿನ ಆಗಮನಕ್ಕೆ ಇನ್ನೂ ಹಲವು ದಿನಗಳು ಹಿಡಿಯಲಿದೆ. ಇದರಿಂದಾಗಿ ಬೆಂಗಳೂರಿನ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಇಷ್ಟೇ ಅಲ್ಲದೆಯೇ ಮಾನಕುರಾದ್ ಹಣ್ಣು ಆಗಮನವಾದಾಗ ಆರಂಭದಲ್ಲಿ ಡಜನ್ ಗೆ ಸರಾಸರಿ 5000 ರೂ ದರ ಇರುತ್ತದೆ. ಇದರಿಂದಾಗಿ ಬೆಂಗಳೂರಿನ ಮಾವಿನ ಹಣ್ಣು ಸದ್ಯ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.