ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧಿಸಲಾದ ಕ್ಲಬ್ ಮಾಲೀಕರಾದ ಸೌರಬ್ ಲುಥರಾ ಹಾಗೂ ಗೌರವ್ ಲುಥರಾ ಸಹೋದರರನ್ನು ಬುಧವಾರ ಮಾಪ್ಸಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಉತ್ತರಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ದೆಹಲಿಯ ಪತಿಯಾಳ ಹೌಸ್ ನ್ಯಾಯಾಲಯವು ಮಂಗಳವಾರ ಸಂಜೆ ಲುಥರಾ ಸಹೋದರರಿಗೆ ಎರಡು ದಿನಗಳ ಟ್ರಾಂಜಿಟ್ ರಿಮಾಂಡ್ ಮಂಜೂರು ಮಾಡಿತ್ತು. ನಂತರ ಇವರಿಬ್ಬರ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ಇವರಿಬ್ಬರನ್ನು ಗೋವಾಕ್ಕೆ ಕರೆತರಲಾಗಿತ್ತು.
ಗೋವಾದ ಮೋಪಾ ವಿಮಾನ ನಿಲ್ದಾಣದಿಂದ ಇವರಿಬ್ಬರನ್ನು ಮೊದಲು ಶಿವೋಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಅವರಿಗೆ ಎದೆ ಮತ್ತು ಬೆನ್ನು ನೋವಿನ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಮಾಪ್ಸಾದ ಉತ್ತರಗೋವಾ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ತಪಾಸಣೆ ಪೂರ್ಣಗೊಳಿಸಿದ ನಂತರ ಪೋಲಿಸ್ ಬಂದೋಬಸ್ತ ನಲ್ಲಿ ಇವರಿಬ್ಬರನ್ನು ಹಣಜುಣ ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಬುಧವಾರ ಮಧ್ಯಾನ್ಹ ಮಾಪ್ಸಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟನಲ್ಲಿ ಇವರಿಬ್ಬರೂ ಕೂಡ ತಮ್ಮ ಅನಾರೋಗ್ಯದ ಸಮಸ್ಯೆ ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಮತ್ತೆ ಮಾಪ್ಸಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
