ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕುಣಬಿ ಸಮಾಜ ಭವನದಲ್ಲಿ 2025-26 ನೇ ಸಾಲಿನ ಆತ್ಮ ಯೋಜನೆ,ಜೋಯಿಡಾ, ಕಾಳಿ ಪ್ರವಾಸೋದ್ಯಮ ಸಂಸ್ಥೆ,ಜೋಯಿಡಾ, ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ ಜೋಯಿಡಾ,ಗೆಡ್ಡೆ ಗೆಣಸು ಬೆಳೆಗಾರರ ಸಂಘ,ಜೋಯಿಡಾ, ಕಾಳಿ ರೈತ ಉತ್ಪಾದಕ ಕಂಪನಿ,ಕುಂಬಾರವಾಡಾ ಇವುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 17 2025 ರ ಬುಧವಾರ 12 ನೇ ಗೆಡ್ಡೆ ಗೆಣಸು ಮೇಳಕ್ಕೆ ಚಾಲನೆ ನೀಡಿಲಾಯಿತು.
ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ರಮೇಶ ನಾಯ್ಕ ಮಾಜಿ ಜಿ.ಪಂ ಸದಸ್ಯರು,ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಿಮಾ ಮಿರಾಶಿ,ಉಪಾಧ್ಯಕ್ಷ ಸಂತೋಷ ಮಂತೇರೋ, ಜೋಯಿಡಾದ ಮಿರಾಶಿಗಳಾದ ವಿನೋದ ಮಿರಾಶಿ,ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ,ವಿನಯ ದೇಸಾಯಿ ಅಧ್ಯಕ್ಷರು ಕಾಳಿ ಪ್ರವಾಸೋದ್ಯಮ ಸಂಸ್ಥೆ,ಜೋಯಿಡಾ,ರವೀಂದ್ರ ರೇಡಕರ,ಅಧ್ಯಕ್ಷರು ಗ್ರೀನ್ ಎಕ್ರೇಸ್ ಜೋಯಿಡಾ,ವಿಷ್ಣು ಡೇರೆಕರ,ಅಧ್ಯಕ್ಷರು ಗೆಡ್ಡೆ ಗೆಣಸು ಬೆಳೆಗಾರರ ಸಂಘ ಜೋಯಿಡಾ,ಕೃಷ್ಣಾ ಮಿರಾಶಿ,ಅಜಿತ್ ಮಿರಾಶಿ, ಸುಶೀಲ್ ನಾಯ್ಕ,ಶಿವಪ್ರಸಾದ ಗಾಂವ್ಕರ,ಪ್ರಕಾಶ ಮೇಟಿ,ಡಾ.ಜಿ ಸತೀಶ,ಡಾ.ಹರೀಶ ಡಿ.ಕೆ,ಡಾ.ಇಮಾಮ್ ಸಾಹೇಬ್ ಜಟ್ , ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತ,ನಿರೂಪಣೆಯನ್ನು ಸುದರ್ಶನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದ ಡಾ.ಜಯಾನಂದ ಡೇರೆಕರವರು ಮಾನ್ಯ ಶಾಸಕರಾದ ಆರ್ ವಿ ದೇಶಪಾಂಡೆಯವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗುತ್ತಿಲ್ಲ ,ಮುಂದಿನ ದಿನಗಳಲ್ಲಿ ಜೋಯಿಡಾದಲ್ಲಿ ಉತ್ಪಾದನೆಯಾಗುವ ಗೆಡ್ಡೆ-ಗೆಣಸು ಮತ್ತು ಅದರ ಉತ್ಪನ್ನಗಳು ರಾಜ್ಯದಾದ್ಯಂತ ವ್ಯಾಪಕ ಮಾರುಕಟ್ಟೆ ಹೊಂದಿ,ರೈತರ ಆದಾಯ ಹೆಚ್ಚಿಸಿ,ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಮಟ್ಟವನ್ನು ಮತ್ತಷ್ಟು ಬಲಪಡಿಸಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಸಂದೇಶವನ್ನು ಓದಿದರು.ರವಿಶಂಕರ ಡೇರೆಕರ,ನಿತಿನ್ ಶೆಟ್ಟಿ,ದಯಾನಂದ ಕುಮಗಾಳಕರ,ಶುಭೇಂದು ಕಾಮತ್ ಸಹಕಾರ ನೀಡಿದರು. ಗೆಡ್ಡೆ ಗೆಣಸು ಮೇಳದಲ್ಲಿ ಸುಪ್ರಸಿದ್ಧ ಕುಣಬಿ ಮುಡ್ಲಿ ಸೇರಿದಂತೆ ಜೋಯಿಡಾದ ಬುಡಕಟ್ಟು ಜನಾಂಗದವರು ಬಳಸುವ ಗೆಡ್ಡೆ ಗೆಣಸುಗಳ ಪ್ರದರ್ಶನ, ಸ್ಪರ್ಧೆ,ಮಾರಾಟ ಹಾಗೂ ಆಹಾರ ಮೇಳ ನಡೆಯಲಿದೆ.
