ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಶಿಕ್ಷಣ ಕ್ಷೆತ್ರದಲ್ಲಿ ಸಾಧನೆ ಸುಲಭ ವಲ್ಲ ಆದರೆ ಸಾಧನೆ ಮಾಡಬೇಕು ಎಂದು ಹೊರಟು ಸಾಧಿಸಿದ ವಿದ್ಯಾರ್ಥಿ ಪ್ರತೀಕ ದೇಸಾಯಿ ತಾಲೂಕಿನ ಗುಂದ ದ ಶೇವಾಳಿ ಯ ಪ್ರತೀಕ್ ವಸಂತ ದೇಸಾಯಿಶಿಕ್ಷಣ ಕ್ಷೆತ್ರದಲ್ಲಿ ಸಿ ಎಸ್ (CS)ಮುಗಿಸಿಕೊಂಡು ಸಾಧನೆಯ ದಾರಿಯಲ್ಲಿ ಸಾಗಿರುವುದು ತಾಲೂಕಿಗೆ ಹೆಮ್ಮೆತಂದಿದೆ ತಾಲೂಕಿನ ಕೆಲವೇ ಕೆಲವು CS ಮುಗಿಸಿದ ವಿದ್ಯಾರ್ಥಿಗಳಲ್ಲಿ ಪ್ರತೀಕ್ ಕೂಡ ಒಬ್ಬ ಎಂದು ಹೇಳಬಹುದು.

ಇದೇ ಕುಟುಂಬದ ನಾರಾಯಣ ರಮೇಶ ದೇಸಾಯಿ ಕೂಡ CS ಮಾಡಿ ಬೆಂಗಳೂರಿನಲ್ಲಿ ಉತ್ತಮ ವಾದ ಉದ್ಯೋಗ ದಲ್ಲಿದ್ದಾರೆ. ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ದ ಶೇವಾಳಿ ಗ್ರಾಮದ ಕೃಷಿ ಕುಟುಂಬದ ವಸಂತ ದೇಸಾಯಿ ಮತ್ತು ವನಿತಾ ದೇಸಾಯಿ ದಂಪತಿ ಗಳ ಇಬ್ಬರು ಪುತ್ರರಲ್ಲಿ ಮೊದಲನೇ ಮಗ ಪ್ರಶಾಂತ ಮತ್ತು ವೀಣಾ ದಂಪತಿಗಳು ಉತ್ತಮ ಶಿಕ್ಷಣ ಪಡೆದು ಕೃಷಿಯಲ್ಲಿ ತಂದೆ ತಾಯಿಯರಿಗೆ ಸಹಾಯ ಮಾಡುತ್ತಿದ್ದರೆ ಎರಡನೇ ಮಗ ಪ್ರತೀಕ್ ದೇಸಾಯಿ CS ಮುಗಿಸಿ. ಅವಾರ್ಡ ಪಡೆದುಕೊಂಡಿದ್ದಾರೆ ಕಳೆದ ದಿ 14 ರಂದು ಪ್ರತೀಕ್ ದೇಸಾಯಿ ಗೆ ಮದುರೈಕಾಲೇಜ್ ನಲ್ಲಿ ಅವಾರ್ಡ ಪ್ರಧಾನ ಮಾಡಲಾಯಿತು ಈ ಸಂದರ್ಭದಲ್ಲಿ ಅನೇಕ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು CS ಮುಗಿಸಿದೆ ಪ್ರತೀಕ್ ದೇಸಾಯಿ ಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.