ಸುದ್ಧಿಕನ್ನಡ ವಾರ್ತೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಪ್ರಯುಕ್ತ ಡಿ.13ರಂದು ರಾತ್ರಿ 10 ಗಂಟೆಗೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಶ್ರೀ ದುರ್ಗಾದೇವಿ ಹೆಣ್ಣು ಮಕ್ಕಳ ನಾಟ್ಯ ಸಂಘದವರಿಂದ ಬೈಲಾಟದ ಎಲ್ಲಾ ಪಾತ್ರಧಾರಿಗಳಲ್ಲಿ ಹೆಣ್ಣು ಮಕ್ಕಳಿ(ನಟ, ನಟಿಯರಿ)ಂದ ಸಂಗ್ಯಾ ಬಾಳ್ಯಾ ಎಂಬ ಸಾಮಾಜಿಕ ಬೈಲಾಟ ಪ್ರದರ್ಶನಗೊಂಡು ಈ ಬೈಲಾಟದ ಎಲ್ಲಾ ಪಾತ್ರಧಾರಿಗಳು ಎಲ್ಲಾ ಪ್ರೇಕ್ಷಕರ ಮನ ರಂಜಿಸಿದರು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಸದಸ್ಯರು, ಸುಮಾರು ನೂರಾರು ಜನ ಪ್ರೇಕ್ಷಕರು ಇದ್ದರು.
