ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಡೀಸೆಲ್ ಕೊರತೆಯಿಂದಾಗಿ ಅಂಕೋಲಾದಲ್ಲಿ (Ankola,Karnataka) ಸಿಲುಕಿಕೊಂಡಿದ್ದ ಕಾಣಕೋಣದ ತಳಪಣದ ಮೀನುಗಾರಿಕೆ ದೋಣಿಯನ್ನು ಮೀನುಗಾರಿಕೆ ಇಲಾಖೆ ಪತ್ತೆಹಚ್ಚಿದೆ. ಸಂದೀಪ್ ಅರೋಂಡೆಕರ್, ಚೇತನ್ ಅರೋಂಡೆಕರ್, ಅನಿಕೇತ್ ಗಾವೋಕರ್ ಮತ್ತು ಬ್ಯಾರಿಸ್ ಬರೆಟ್ಟೊ ಈ ನಾಲ್ವರನ್ನು ಸುರಕ್ಷಿತವಾಗಿ ಪೋಲಿಸ್ ಮತ್ತು ನೌಕಾದಳದ ಸಿಬ್ಬಂಧಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಸೋಮವಾರ ಕಾಣಕೋಣದಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ 4 ಮೀನುಗಾರರು ರಾತ್ರಿಯಾದರೂ ವಾಪಸ್ಸಾಗದೇ ಇರುವುದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ಸಹಾಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾರೂ ಬಾರದ ಕಾರಣ ಬೇಸರಗೊಂಡ ಸ್ಥಳೀಯರು ಹಾಗೂ ಮೀನುಗಾರರ ಕುಟುಂಬಸ್ಥರು ಮಂಗಳವಾರ ಗೋವಾ-ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನೂ ಬಂದ್ ಮಾಡಿದ್ದರು.
ನಂತರ ನೌಕಾ ದಳದ ಸಿಬ್ಬಂಧಿಗಳು ಹಾಗೂ ಪೋಲಿಸ್ ಸಿಬ್ಬಂಧಿಗಳು ಆಗಮಿಸಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. .