ಸುದ್ದಿ ಕನ್ನಡ ವಾರ್ತೆ

ಅಂಕೋಲಾ: ತೋಟದಲ್ಲಿ ಹೂವಿನ ಗಿಡಗಳನ್ನು ನೋಡಲು ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬರು ವಿಷದ ಹಾವು ಕಡಿದು ಮೃತಪಟ್ಟ ಘಟನೆ ರಾಮನಗುಳಿಯ ಕಂಡ್ರಮನೆಯಲ್ಲಿ ನಡೆದಿದೆ.

ಕಂಡ್ರಮನೆಯ ಶೇಖರ ವೈದ್ಯ ಅವರ ಪತ್ನಿ ಯಶೋಧಾ ವೈದ್ಯ (39) ಮೃತ ಮಹಿಳೆಯಾಗಿದ್ದಾರೆ. ತಮ್ಮ ಪತಿಯೊಂದಿಗೆ ತೋಟಕ್ಕೆ ತೆರಳಿದ ಸಂದರ್ಭ ಎಡಗಾಲಿನ ಪಾದದ ಮೇಲ್ಭಾಗದಲ್ಲಿ ವಿಷಜಂತು ಕಚ್ಚಿದ್ದರಿಂದ ಚಿಕಿತ್ಸೆಗೆಗಾಗಿ ಗುಳ್ಳಾಪುರದ ವೈಷ್ಣವಿ ಮೆಡಿಕಲ್ ಗೆ ಕರೆದೊಯ್ಯಲಾಯಿತು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಯಲ್ಲಾಪುರ ತಾಲೂಕಾಸ್ಪತ್ರೆಗೆ ತೆರಳುವಾಗ ದಾರಿ ಮಧ್ಯದಲ್ಲಿ ಉಸಿರಾಟ ಸಮಸ್ಯೆಗೆ ಒಳಗಾದರು. ಯಲ್ಲಾಪುರ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಮೃತರು ಪತಿ‌ ಹಾಗು ಸಣ್ಣ ವಯಸ್ಸಿನ ಶಾಲೆಗೆ ತೆರಳುವ ಒಬ್ಬ ಪುತ್ರ, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.