ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಾರ್ಟೋಳಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು,ಪ್ರೀತಿಪದ (ಡಾ.ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ)ಆದಿವಾಸಿ ಹಕ್ಕುಗಳ ಸಮಿತಿ.ಉತ್ತರಕನ್ನಡ ಇವರ ಜಂಟಿ ಆಯೋಜನೆಯಲ್ಲಿ ಗಡಿಯಲ್ಲಿ ಜನಜೀವನ-ಸಾಹಿತ್ಯ-ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ ಕಾರ್ಟೋಳಿ,ಕುಂಬಾರವಾಡಾ,ಜೋಯಿಡಾ,ಉತ್ತರಕನ್ನಡ ಸೋಮವಾರ 15-12-2025 ರಂದು ನಡೆಯಿತು. ಕುಣಬಿ ಸೊಂಗೊ-ಕುಂಡಲ,ಕಾರ್ಟೋಳಿ, ವಾಗೇಲಿ,ಡಿಗ್ಗಿ,ಸಿಸೈ ಕಲಾವಿದರಿಂದ, ಪುಗಡಿ ಮತ್ತು ಹಾಡು ಮಹಿಳಾ ತಂಡದವರಿಂದ ಕಲಾ ಪ್ರದರ್ಶನ ನಡೆಯಿತು.
ಜಿಲ್ಲೆಯ ಪ್ರಧಾನ ಬುಡಕಟ್ಟುಗಳ ಬದುಕು,ಗಡಿ ಪ್ರದೇಶದ ಪರಿಸ್ಥಿತಿ,ಕಲೆ,ಅಭಿವೃದ್ಧಿಯ ಸಂಬಂಧಗಳು,ಕುಣಬಿ ಬದುಕು ಮತ್ತು ಕಲೆ,ಸಮುದಾಯದ ಅಭಿವೃದ್ಧಿಯ ಸಾಧ್ಯತೆಗಳು ಎಂಬ ವಿಷಯ ಮಂಡನೆ ಕಾರ್ಯಕ್ರಮ ಯಮುನಾ ಗಾಂವಕರ ರೈತ ಕಾರ್ಮಿಕ ಮುಖಂಡರು, ಪ್ರೇಮಾನಂದ ವೇಳಿಪ ಸಂಚಾಲಕರು ಆದಿವಾಸಿ ಹಕ್ಕುಗಳ ಸಮಿತಿ.ಉತ್ತರಕನ್ನಡ ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಾದ ಡಾ.ಪುರುಷೋತ್ತಮ ಬಿಳಿಮಲೆ, ಎನ್.ಎಲ್.ಮುಕುಂದರಾಜ್, ಯಮುನಾ ಗಾಂವ್ಕರರವರು ಸ್ಥಳೀಯ ಕಾರ್ಟೋಳಿ ಶಾಲೆಗೆ ಬೇಟಿ ನೀಡಿ ಶಿಕ್ಷಕ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಶಾಂತಾ ವೇಳಿಪ, ಡಾ.ಪುರುಷೋತ್ತಮ ಬಿಳಿಮಲೆ,ಎನ್ ಎಲ್ ಮುಕುಂದರಾಜ್, ದಿವ್ಯಾ ದಯಾನಂದ ನಾಯ್ಕ,ದಿಗಂಬರ ದೇಸಾಯಿ, ಯಮುನಾ ಗಾಂವಕರ, ಪ್ರೇಮಾನಂದ ವೇಳಿಪ,ಮಾಬಳು ಕುಂಡಲಕರ,ಕೃಷ್ಣಾ ಮಿರಾಶಿ,ಶಿಕ್ಷಕ ರಾದ ವಿನಾಯಕ ಪಟಗಾರ, ಶಾಂತಕುಮಾರ ಎಸ್ ಕೆ,ದಯಾನಂದ ನಾಯ್ಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ, ನಿರ್ವಹಣೆಯನ್ನು ರಾಜೇಶ ಗಾವಡಾ ನಡೆಸಿಕೊಟ್ಟರು. ಕೊನೆಯಲ್ಲಿ ವಂದನಾರ್ಪಣೆಯನ್ನು ಉಮೇಶ ವೇಳಿಪ ಕುಂಡಲರವರು ನಡೆಸಿಕೊಟ್ಟರು.
