ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪೋಲೀಸ್ ಇಲಾಖೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಕಾರ್ಟೋಳಿ ಶಾಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಜೋಯಿಡಾ ಪೋಲೀಸ್ ಇಲಾಖೆಯ ಪಿ.ಎಸ್.ಐ ಮಹೇಶ ಮಾಳಿಯವರು ಕಾರ್ಟೋಳಿ ಗ್ರಾಮಕ್ಕೆ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೋಕ್ಸೋ ಕಾಯ್ದೆ,ಸಂಚಾರ ನಿಯಮ,ಸೈಬರ್ ಅಪರಾಧ,112 ಸಹಾಯವಾಣಿ,ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಮುಖ್ಯ ಶಿಕ್ಷಕರಾದ ವಿನಾಯಕ ಪಟಗಾರ,ಸಹ ಶಿಕ್ಷಕರಾದ ಶಾಂತಕುಮಾರ ಎಸ್ ಕೆ,ಉಮೇಶ ವೇಳಿಪ,ದಯಾನಂದ ಕುಮಗಾಳಕರ,ದಿವಾಕರ ಕುಂಡಲಕರ,ಗ್ರಾಮದ ಪ್ರಮುಖರು,ಯುವಕರು, ಮಕ್ಕಳು,ಸಾರ್ವಜನಿಕರು ಇದ್ದರು.
