ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನ ಕುಳಿನಾಡು ಸೀಮೆ ಕೊಡ್ಲಗದ್ಧೆ  ಮಾತೃ ಮಂಡಳ ದಿಂದ ಕೊಡ್ಲಗದ್ಧೆಯ ಶರಾವತಿ ಹೆಗಡೆ ರವರಿಗೆ “ದಿಟ್ಟ ಮಹಿಳೆ” ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿಪತ್ರ”
ಶ್ರೀಮತಿ ಶರಾವತಿ ಹೆಗಡೆಯವರೆ ತಾವು ಮೂಲತಃ ಶಿರಸಿ ತಾಲೂಕಿನ ಹೆಗ್ಗಾರಿನವರಾದ ತಾವು 22/02/1950 ರಲ್ಲಿ ಶಿರಸಿ ತಾಲೂಕಿನ ಗುಮ್ಮನ ಮನೆಯ ಶ್ರೀ ಪರಮೇಶ್ವರ ಹಾಗೂ ಶ್ರೀಮತಿ ಗೌರಿ ರವರ 10 ಮಕ್ಕಳಲ್ಲಿ 10 ನೇಯವರಾಗಿ ತಾವು ಜನಿಸಿದಿರಿ. ಕಡು ಬಡತನದಲ್ಲಿ ಹೆಗಡೆಕಟ್ಟಾ ಪ್ರೌಢಶಾಲೆಯಲ್ಲಿ 10 ನೇಯ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದಿರಿ. 1993 ರಲ್ಲಿ ನಾರಾಯಣ ಹೆಗಡೆ ತಾರೀಪಾಲ್ ಕೊಡ್ಲಗದ್ಧೆ ರವರನ್ನು ವಿವಾಹವಾಗಿ ಬಂದು ಕೊಡ್ಲಗದ್ಧೆಯಲ್ಲಿ ಬದುಕು ಪ್ರಾರಂಭಿಸಿದಿರಿ.

ವಿನಯ ಎಂಬ ಗಂಡು ಮಗುವಿಗೆ ಜನ್ಮ ನೀಡಿದಿರಿ. ಆಗಲೆ ಪತಿ ಮಾನಸಿಕ ಅನಾರೋಗ್ಯಕ್ಕೆ ತುತ್ತಾದರೂ ಬದುಕಿನ ಕಷ್ಠದ ಸಮಯದಲ್ಲಿ ದೃತಿಗೆಡದೆಯೇ ಕಷ್ಠ ಪರಿಸ್ಥಿತಿಯಲ್ಲೂ ಮಗನನ್ನು ಉತ್ತಮ ವ್ಯಕ್ತಿಯನ್ನಾಗಿ ಬೆಳೆಸಿ ಬದುಕು ಕಟ್ಟಿನೊಂಡು ಊರಿನಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಾ “ದಿಟ್ಟ ಮಹಿಳೆಯಾಗಿ”ಬದುಕಿದಿರಿ.

ಈ ಮೂಲಕ ಇಂದಿನ ಯುವತಿಯರಿಗೆ ತಾವು ಮಾದರಿ ಎಂದು ಗುರುತಿಸಿ ನಿಮ್ಮನ್ನು “ದಿಟ್ಟ ಮಹಿಳೆ” ಎಂದು ಕುಳಿನಾಡು ಸೀಮೆ ಕೊಡ್ಲಗದ್ಧೆ ಮಾತೃ ಮಂಡಳಿ ಯಿಂದ ನಿಮ್ಮನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ. ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಆಯುರಾರೋಗ್ಯವನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗಿದೆ.

ಕೊಡ್ಲಗದ್ಧೆ ಮಾತೃಮಂಡಲದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರವಿಕಿರಣ ಭಟ್ ಕೊಡ್ಲಗದ್ಧೆ , ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರ ವತಿಯಿಂದ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.