ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಗುಂದದ ಮುಖ್ಯ ಶಿಕ್ಷಕರಾದ ಜೋಸಫ್ ಬಿ ಗೊನ್ಸಾಲಿಸ್ ಅವರನ್ನು ಭಟ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು,ದಿನಾಂಕ:14-12-2025 ರ ರವಿವಾರ ನಡೆದ ಗುರುವಂದನಾ ಹಾಗೂ 2008-09ನೇ ಸಾಲಿನ ಎಸ್.ಎಸ್ ಎಲ್.ಸಿ ತರಗತಿಯ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಸಮ್ಮೇಳನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆ ಸಾಲಿನ ಇನ್ನುಳಿದ ಗುರುವೃಂದದವರನ್ನು ಸನ್ಮಾನಿಸಲಾಯಿತು.