ಸುದ್ದಿ ಕನ್ನಡ ವಾರ್ತೆ

ಅಂಕೋಲಾ: ಬಹು ಚರ್ಚಿತ ಅಂಕೋಲ ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಇದೀಗ ಚಾಲನೆ ದೊರೆಯಲಿದೆ. ಕೇಂದ್ರ ಸರ್ಕಾರವು ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಡಿಪಿಆರ್ ಸಿದ್ದಪಡಿಸಿದೆ.

ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ₹18,424 ಕೋಟಿ ವೆಚ್ಚದ ರೈಲು ಯೋಜನೆಗಳಿಗೆ ಪ್ರಧಾನಿ  Narendra Modi ಸರ್ಕಾರ ಅಸ್ತು ಅಂದಿದೆ.

ಹುಬ್ಬಳ್ಳಿ-ಅಂಕೋಲಾ 163 ಕಿ.ಮೀ. ರೈಲು ಮಾರ್ಗಕ್ಕೆ ಡಿಪಿಆರ್ ಸಿದ್ಧವಾಗಿದ್ದು, 46.57 ಕಿ.ಮೀ. ಅಂತರದಲ್ಲಿ 57 ಸುರಂಗ ಮಾರ್ಗ ಮತ್ತು 13.8 ಕಿ.ಮೀ.ನಲ್ಲಿ 48 ವಯಾಡಕ್ಟ್‌ಗಳ ನಿರ್ಮಾಣವಾಗಲಿದೆ.