ಸುದ್ಧಿಕನ್ನಡ ವಾರ್ತೆ
ಅಮೇರಿಕಾದ ಹಲವು ಸಂಸ್ಥೆಗಳು ಭಾರತದತ್ತ ಮುಖ ಮಾಡುತ್ತಿರುವುದನ್ನು ತಡೆಯಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ್  (US President Donald Trump) ಹಲವು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದೀಗ ಮತ್ತೊಂದು ತೆರಿಗೆ ಹೊರೆ ಹಾಕಲು ಅಮೇರಿಕಾ ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಈ ಮೂಲಕ ಇದೀಗ ಭಾರತದ ಅಕ್ಕಿಯ ಆಮದಿನ ಮೇಲೆ ದೊಡ್ಡಣ್ಣನ ವಕೃದೃಷ್ಠಿ ಬಿದ್ದಂತಾಗಿದೆ.

ಅಮೇರಿಕಾ ಶ್ವೇತಭವನದಲ್ಲಿ (US White House) ಮಾತನಾಡಿದ ಅವರು- ಭಾರತ ಮತ್ತು ಇತರ ಏಷ್ಯಾದ ಪೂರೈಕೆದಾರರಿಂದ ಕೃಷಿ ಆಮದಿನ ಬಗೆಗಿನ ತಮ್ಮ ಟೀಕೆಗಳನ್ನು ಅಮೇರಿಕ ದೊಡ್ಡಣ್ಣ ಮುಂದುವರೆಸಿದ್ದಾರೆ. ಭಾರತ ಮತ್ತು ಅಮೇರಿಕಾ ವ್ಯಾಪಾರ ಒಪ್ಪಂದ ಮಂದಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ ಅಮೇರಿಕಾ ದೊಡ್ಡಣ್ಣ ಅಸಮಾಧಾನಗೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಭಾರತದ ಅಕ್ಕಿ ಮತ್ತು ಕೆನಡಾದ ರಸಗೊಬ್ಬರಗಳ ಮೇಲೆ ಹೊಸ ಸುಂಕ ಪರಿಚಯಿಸುವ ಬಗ್ಗೆ ನಾನು ಗಂಭೀರವಾಗಿ ಚಿಂತಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ. ಈ ಮೂಲಕ ಅಮೇರಿಕಾ ದೇಶವು ಭಾರತದ ಮೇಲೆ ಮತ್ತೊಂದು ಸುಂಕಾಸ್ತ್ರ ಧಾಳಿಗೆ ಮುಂದಾಗಿದೆ.