ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮತ್ತು ಕರ್ನಾಟಕವನ್ನು  (Goa-Belagavi) ಸಂಪರ್ಕಿಸುವ ಬೆಳಗಾವಿ-ಗೋವಾ ರಸ್ತೆಯ ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದೆ. ಇನ್ನು ಸುಮಾರು 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಇದರಿಂದಾಗಿ ಗೋವಾ-ಬೆಳಗಾವಿ ಮಾರ್ಗದ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ರಸ್ತೆಯು ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ದುರಸ್ತಿಯಿಂದಾಗಿ ಗೋವಾಕ್ಕೆ ಈ ಮಾರ್ಗವಾಗಿ ಆಗಮಿಸುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಕಳೆದ ಹಲವು ತಿಂಗಳುಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದಾಗಿ ಎರಡೂ ರಾಜ್ಯಗಳ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿತ್ತು. ಆದರೆ ಇದೀಗ ಹೊಸ ವರ್ಷ ಆರಂಭಕ್ಕೂ ಮುನ್ನ ಈ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳುತ್ತಿರುವುದರಿಂದ ಈ ಮಾರ್ಗದಲ್ಲಿ ಪ್ರತಿದಿನ ಓಡಾಟ ನಡೆಸುವವರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ಮಾರ್ಗದ ಮುಖ್ಯ ಸೇತುವೆಯಾದ ಕುಸ್ಮಲಿ ಸೇತುವೆ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗಿದೆ. ಮುಂದಿನ ಎರಡು ವಾರಗಳಲ್ಲಿ ಈ ಸೇತುವೆ ಕೂಡ ವಾಹನಗಳ ಓಡಾಟಕ್ಕೆ ಸಿದ್ಧವಾಗಲಿದೆ ಎನ್ನಲಾಗಿದೆ.

ಗೋವಾದಿಂದ ಪ್ರತಿದಿನ ವಿವಿಧ ವಸ್ತುಗಳ ಖರೀದಿಗಾಗಿ ಬೆಳಗಾವಿ ಮಾರುಕಟ್ಟೆಗೆ ಹಲವು ವ್ಯವಾಪಾರಸ್ಥರು ಬಂದು ಹೋಗುತ್ತಾರೆ. ಇಷ್ಟೇ ಅಲ್ಲದೆಯೇ ಗೋವಾಕ್ಕೆ ಬಹುತೇಕ ದಿನದಿತ್ಯದ ಅಗತ್ಯ ವಸ್ತುಗಳು ಕೂಡ ಇದೇ ಮಾರ್ಗವಾಗಿ ಬೆಳಗಾವಿಯಿಂದ ಗೋವಾಕ್ಕೆ ವಾಹನಗಳ ಮೂಲಕ ಪೂರೈಕೆಯಾಗುತ್ತದೆ. ಇಷ್ಟೇ ಅಲ್ಲದೆಯೇ ಗೋವಾಕ್ಕೆ ಪ್ರವಾಸಿ ತಾಣಗಳ ವೀಕ್ಷಣೆಗೆ ಕೂಡ ಕರ್ನಾಟದ ಮಾರ್ಗವಾಗಿ ಪ್ರತಿದಿನ ಗೋವಾಕ್ಕೆ ಪ್ರವಾಸಿಗರು ತೆರಳುತ್ತಾರೆ. ಹೀಗೆ ಒಂದಕ್ಕೊಂದು ರಾಜ್ಯಗಳಿಗೆ ಈ ರಸ್ತೆ ಅತಿ ಮುಖ್ಯ ಸಂಪರ್ಕ ರಸ್ತೆಯಾಗಿದೆ. ಇದೀಗ ರಸ್ತೆ ದುರಸ್ತಿಯಿಂದಾಗಿ ಈ ಮಾರ್ಗದ ಓಡಾಟ ಇನ್ನಷ್ಟು ಸುಲಭವಾಗಲಿದೆ.