ಸುದ್ಧಿಕನ್ನಡ ವಾರ್ತೆ

ಪಣಜಿ(ಮಾಪ್ಸಾ): ಅನೇಕ ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅಂದಿನ ಸರ್ಕಾರ ಕೇಂದ್ರ ರಕ್ಷಣಾ ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಗದೇ ಇದ್ದುದನ್ನು ಮನೋಹರ್ ಪರೀಕರ್ ರವರು ಕೇವಲ 27 ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ. ಗೋವಾದಂತಹ ಸಣ್ಣ ರಾಜ್ಯದಿಂದ ಆಗಮಿಸಿದಂತಹ ಪರೀಕರ್ (Manohar parrikar) ನಿರ್ಣಯ ತೆಗೆದುಕೊಳ್ಳುತ್ತಿದ್ದ ರೀತಿ, ಅವರ ದೂರದೃಷ್ಠಿ ಅಭೇಧ್ಯವಾಗಿತ್ತು. ಇದರಿಂದಾಗಿ ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ರಕ್ಷಣಾ ಮಂತ್ರಿ ದಿ. ಮನೋಹರ್ ಪರೀಕರ್ ರಕ್ಷಣಾ ಕ್ಷೇತ್ರದಲ್ಲಿ ಹೊಸ ದಿಕ್ಕನ್ನೇ ತೋರಿಸಿದರು. ಜಾಗತಿಕ ಮಟ್ಟದಲ್ಲಿ ಉಚ್ಛ ಸ್ಥಾನಕ್ಕೆ ಕೊಂಡೊಯ್ದರು ಎಂದು ಕರ್ನಾಟಕದ ಯುವ ಸಂಸದರಾದ ತೇಜಸ್ವಿಸೂರ್ಯ (MP Tejaswisurya) ನುಡಿದರು.

ದೇಶದ ಮಾಜಿ ರಕ್ಷಣಾ ಮಂತ್ರಿ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ, ಮಾಪ್ಸಾ ಸುಪುತ್ರ ದಿ.ಮನೋಹರ್ ಪರೀಕರ್ ರವರು 70 ನೇಯ ಜಯಂತಿಯ ಅಂಗವಾಗಿ ಹಾಗೂ ಸಂಘ ಶತಾಬ್ದಿ ವರ್ಷದ ನಿಮಿತ್ತ ಗೋವಾದ ಮಾಪ್ಸಾದ ಹನುಮಾನ ನಾಟ್ಯಗೃಹದಲ್ಲಿ ಆಯೋಜಿಸಿದ್ದ “ಸಂಘ ಸಂರಕ್ಷಣೆ ಹಾಗೂ ಮನೋಹರ” ಈ ವಿಷಯದಲ್ಲಿ ಸಂಸದ ತೇಜಸ್ವಿಸೂರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಅಂದು ಕೇಂದ್ರ ರಕ್ಷಣಾ ಮಂತ್ರಿಯಾಗಿ ಮನೋಹರ್ ಪರೀಕರ್ ರವರು ಇಲ್ಲದಿದ್ದರೆ ಇಂದು ಆಪರೇಶನ್ ಸಿಂಧೂರ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭಾರತದ ದೇಶದ ಮೇಲೆ ಉಗ್ರಗಾಮಿಗಳು ನಡೆಸಿದ ಧಾಳಿಯ ವಿರುದ್ಧ ಪ್ರತ್ಯುತ್ತರ ನೀಡಲು ಪಾಕಿಸ್ತಾನದ ಮೇಲೆ ಕೂಡಲೇ ಸರ್ಜಿಕಲ್ ಸ್ಟ್ರೈಕ್ ನಡೆಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಉಗ್ರರ ಹಲ್ಲೆಯಿಂದ ನಮ್ಮ ರಕ್ಷಣಾ ಕ್ಷೇತ್ರದ ಮಾನಸಿಕತೆಯಲ್ಲಿ ಬದಲಾವಣೆ ಮಾತ್ರವಲ್ಲದೆಯೇ ಇನ್ನೂ ಬಲಿಷ್ಠವಾಗುವಂತಾಗಿದೆ. ಹಲ್ಲೆಕೋರರ ಮನೆಗೆ ನುಗ್ಗಿ ಹೊಡೆಯಲು ರಕ್ಷಣಾ ಇಲಾಖೆಗೆ ಆದೇಶ ನೀಡಲಾಗಿತ್ತು ಎಂಧು ಸಂಸದ ತೇಜಸ್ವಿಸೂರ್ಯ ನುಡಿದರು.
ಮನೋಹರ್ ಪರೀಕರ್ ರವರು ನೀಡಿದ ಯೋಗದಾನದಿಂದ ಕೇಂದ್ರ ರಕ್ಷಣಾ ಮಂತ್ರಾಲಯದಲ್ಲಿ ದೊಡ್ಡ ಬದಲಾಬಣೆಯೇ ಆಗಿದೆ. ನೇತೃತ್ವ ವಹಿಸಲು ಪರೀಕರ್ ರವರ ಬಳಿ ಇದ್ದ ಕ್ಷಮತೆ ಹಾಗೂ ದೂರದೃಷ್ಠಿಯನ್ನು ಯಶಸ್ವಿಯಾಗಿ ತೋರಿಸಿಕೊಟ್ಟರು. ರಕ್ಷಣಾ ಕ್ಷೇತ್ರದ ಹಲವು ಸಮಸ್ಯೆಗಳನ್ನು ಅದರ ಮೂಲಕ್ಕೆ ಹೋಗಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇಂದು ಶಸ್ತ್ರಾಸ್ತ್ರಗಳು ಅಥವಾ ಸಂಬಂಧಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಯಾರೂ ಕೂಡ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಇವೆಲ್ಲ ಪರೀಕರ್ ರವರಿಂದಲೇ ಸಾಧ್ಯವಾಗಿದೆ. ಪರೀಕರ್ ರವರ ಕ್ಷಮತೆಯು ಇತರರಿಗಿಂದ ವಿಭಿನ್ನವಾಗಿತ್ತು ಎಂದು ಸಂಸದ ತೇಜಸ್ವಿಸೂರ್ಯ ನುಡಿದರು.

2014 ರಲ್ಲಿ ಲೋಕಸಭೆಯಲ್ಲಿ ಬಿಜೆಪಿ ವಿಜಯಿಯಾದ ನಂತರ ಗೋವಾಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರವರು ಪರೀಕರ್ ರವರ ಶಕ್ತಿ ಹಾಗೂ ನಾಯಕತ್ವವನ್ನು ಗುರುತಿಸಿದ್ದರು. ಆ ಸಂದರ್ಭದಲ್ಲಿ ಪರೀಕರ್ ರವರಲ್ಲದೆಯೇ ಮತ್ತೊಬ್ಬ ರಕ್ಷಣಾ ಸಚಿವರು ಸಿಗಲು ಸಾಧ್ಯವಿಲ್ಲ ಎಂದು ಪ್ರಧಾನಿಗಳು ಅರಿತುಕೊಂಡರು. ಪ್ರಧಾನಮಂತ್ರಿಯವರ ದೂರದೃಷ್ಠಿಯು ದೇಶಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವ ನಾಯಕರು ಅಂದು ಲಭಿಸಿದರು ಎಂದು ಸಂಸದ ತೇಜಸ್ವಿಸೂರ್ಯ ನುಡಿದರು.

 

ಈ ಸಂದರ್ಭದಲ್ಲಿ ಮೇಧಾ ಮನೋಹರ್ ಪರೀಕರ್ ಸೇವಾ ಕೇಂದ್ರದ ಅಧ್ಯಕ್ಷ ಸಂಜಯ ವಾಲಾವಲಕರ್, ದಿ. ಮನೋಹರ್ ಪರೀಕರ್ ರವರ ಪುತ್ರ ಉತ್ಪಲ್ ಪರೀಕರ್, ಮಹೇಶ್ ಕೊರಗಾಂವಕರ್, ವಿವೇಕ ಕೇರಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪರೀಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಪರೀಕರ್ ರವರ ಜೀವನಾಧಾರಿತ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.