ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವ ದಿ.ಮನೋಹರ್ ಪರೀಕರ್ ರವರ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸಿದ ಬಿಜೆಪಿ ಸಂಸದ ತೇಜಸ್ವಿಸೂರ್ಯ ರವರು ಗೋವಾದ ಮೀರಾಮಾರ್ ನಲ್ಲಿರುವ ದಿ.ಪರೀಕರ್ ರವರ ಸಮಾಧಿ ಬಳಿ ತೆರಳಿ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಪರೀಕರ್ ರವರ ಪುತ್ರ ಉತ್ಪಲ್ ಪರೀಕರ್ ಉಪಸ್ಥಿತರಿದ್ದರು.

ದಿ.ಪರೀಕರ್ ರವರ ದೃಷ್ಠಿಕೋನ ಮತ್ತು ಆದರ್ಶಗಳು ನಮ್ಮ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇವೆ ಎಂದು ಸಂಸದ ತೇಜಸ್ವಿ ಸೂರ್ಯ ರವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.