ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ “ಕೌತುಕ” ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಅಳಿವಿನಂಚಿನಲ್ಲಿರುವ ವಿಶಿಷ್ಟ ಪಕ್ಷಿ ಸಂಕುಲಗಳಲ್ಲಿ ಒಂದಾದ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಹಾರ್ನ್ ಬಿಲ್(ಮಂಗಟ್ಟೆ)ಪಕ್ಷಿಯ ಕುರಿತಾದ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂಧಿಸಿದ ಉಪಯೋಗಿ ಮಾಹಿತಿಯುಳ್ಳ “ಕೌತುಕ ” ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕೌತುಕ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಅದರಲ್ಲಿ ಅಭಿನಯ ಮಾಡಿದ ವಿಕ್ರಂ ಎನ್ನುವವರು ನಡೆಸಿಕೊಟ್ಟರು. ಬಾಮಣಗಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣ ಕುಮಾರ ನಾಯ್ಕ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ, ಪಿಲೋಮೀನ ನರೋನ,ಸುಮನಾ ಸಹಕಾರ ನೀಡಿದರು.
